ಡಿ.26ರಿಂದ 30ರವರೆಗೆ ಮೂರ್ನಾಡುವಿನಲ್ಲಿ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಪಂದ್ಯಾವಳಿ

ಡಿ.26ರಿಂದ 30ರವರೆಗೆ ಮೂರ್ನಾಡುವಿನಲ್ಲಿ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಪಂದ್ಯಾವಳಿ

ಮಡಿಕೇರಿ: ಕೊಡವ ಹಾಕಿ ಅಕಾಡೆಮಿ ಮತ್ತು ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಪಂದ್ಯಾಟದ ಡಿ.26ರಿಂದ 30ರವರೆಗೆ ಮೂರ್ನಾಡಿನ ದಿ.ಬಾಚೆಟ್ಟೀರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಡಂಡ ಕೆ.ಬೋಪಣ್ಣ ತಿಳಿಸಿದ್ದಾರೆ.

 1997ನೇ ಇಸವಿಯಲ್ಲಿ ಪಾಂಡಂಡ ದಿ.ಕುಟ್ಟಪ್ಪ ಕುಟ್ಟಣಿ ಹಾಗೂ ಸಹೋದರ ಕಾಶಿ ಅವರಿಂದ ಕರಡದಲ್ಲಿ ಆಧ್ಯವಾಗಿ ಸುಮಾರು ಅರವತ್ತು ಕೊಡವ ಕುಟುಂಬಗಳಿAದ ಶುರುವಾದ ಕೊಡವ ಕುಟುಂಬಗಳ ನಡುವೆ ಹಾಕಿ ಹಬ್ಬವು ಕೊಡಗಿನ ಎಲ್ಲಾ ಭಾಗಳಲ್ಲಿ ನಡೆಯುತ್ತಾ ಬಂದಿದೆ. ಲಿಮ್ಕ ಬುಕ್ ಆಫ್ ರೆಕಾರ್ಡ್ಸ್ 2024ರಲ್ಲಿ ನಾಪೋಕ್ಲುವಿನಲ್ಲಿ ನಡೆದ ಕುಂಡ್ಯೋಳಂಡ ಹಾಕಿ ಹಬ್ಬವು ಗಿನ್ನೀಸ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಕಳೆದ ವರ್ಷ ಮಡಿಕೇರಿಯಲ್ಲಿ ನಡೆದ 25ನೇ ವರ್ಷದ ಮುದ್ದಂಡ ಹಾಕಿ ಹಬ್ಬವು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಎಂಬ ಬಿರುದನ್ನು ಪಡೆದಿರುವುದು ಕೊಡವ ಹಾಕಿ ಅಕಾಡೆಮಿಗೆ ಸಂದ ಗೌರವವಾಗಿದೆ. ಅದೇ ರೀತಿ ಪಾಂಡAಡ ದಿ.ಕುಟ್ಟಪ್ಪ ಅವರಿಗೆ ಚಾಂಪಿಯನ್ ಟ್ರೋಫಿ ನಡೆಸುವ ಆಕಾಂಕ್ಷೆ ಇತ್ತು. ಆದರೆ ಸಾಧ್ಯವಾಗಿರಲಿಲ್ಲ.

 ಇದರ ಭಾಗವಾಗಿ ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್ ಸಂಸ್ಥೆ, ಎಂ.ಬಾಡಗ ಸ್ಫೋರ್ಟ್ಸ್ ರಿಕ್ರಿಷೇಶನ್ ಸಂಸ್ಥೆ, ಮೂರ್ನಾಡು ವಿದ್ಯಾಸಂಸ್ಥೆ ಸಹಕಾರದೊಂದಿಗೆ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪಂದ್ಯಾಟದಲ್ಲಿ ಕಳೆದ 25 ವರ್ಷಗಳಲ್ಲಿ ಕೊಡವ ಹಾಕಿ ಹಬ್ಬದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಸುಮಾರು 13 ತಂಡಗಳು ಪಾಲ್ಗೊಳ್ಳುತ್ತಿದೆ.

 4 ವಿಭಾಗಗಳಾಗಿ ಮಾಡಿದ್ದು, ಪಂದ್ಯಾಟ ಲೀಗ್ ಮಾದರಿಯಲ್ಲಿ ನಡೆಯಲಿದೆ. ವಿಜೆತರಿಗೆ 2 ಲಕ್ಷ, ದ್ವಿತೀಯ ಸ್ಥಾನ 1 ಲಕ್ಷ, ಸೆಮಿಫೈನಲಿಸ್ಟ್ ತಂಡಕ್ಕೆ ತಲಾ 50,000 ಮತ್ತು ಭಾಗವಹಿಸಿದ್ದ ತಂಡಕ್ಕೆ ತಲಾ 25,000 ನೀಡಲಾಗುತ್ತದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ತಾಲೂಕು ಉಪಾಧ್ಯಕ್ಷರಾದ ಕೆ.ಸುರೇಶ್ ಅಪ್ಪಯ್ಯ, ಕೆ.ರಮೇಶ್ ಮುದ್ದಯ್ಯ, ಬಿ.ಪ್ರದೀಪ್ ಪೂಣಚ್ಚ, ಗೌರವ ಕಾರ್ಯದರ್ಶಿ ಕುಲ್ಲೇಟೀರ ಅರುಣ್‌ಬೇಬ, ನಿದೇರ್ಶಕರಾದ ಮುಕ್ಕಾಟೀರ ಸೋಮಯ್ಯ ಹಾಜರಿದ್ದರು.