ನೆಲ್ಲಿಹುದಿಕೇರಿ;ಡ್ರಿಂಕ್&ಡ್ರೈವ್, ವಿದ್ಯುತ್ ಕಂಬಕ್ಕೆ ಜಿಪ್ಸಿ ವಾಹನ ಡಿಕ್ಕಿ;ಚಾಲಕನ ವಿರುದ್ಧ ಪ್ರಕರಣ ದಾಖಲು
ಸಿದ್ದಾಪುರ: ಮದ್ಯಪಾನ ಮಾಡಿಕೊಂಡು ಜಿಪ್ಸಿ(HP 47A 5716) ವಾಹನ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿಪಡಿಸಿರುವ ಘಟನೆ ಸೋಮವಾರ ರಾತ್ರಿ ಎಂಟು ಗಂಟೆಗೆ ಸಿದ್ದಾಪುರ- ಚೆಟ್ಟಳ್ಳಿ ಮುಖ್ಯರಸ್ಥೆಯ ನೆಲ್ಲಿಹುದಿಕೇರಿಯಲ್ಲಿ ನಡೆದಿದೆ.
ವಾಹನದ ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು,ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಮದ್ಯಸೇವಿಸಿ ವಾಹನ ಚಲಾಯಿಸಿದ ನಾಲ್ಕೇರಿ ಗ್ರಾಮದ ಕಾರ್ತಿಕ್ ಸೋಮಣ್ಣ(29) ಇವರ ಮೇಲೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
What's Your Reaction?
Like
1
Dislike
0
Love
1
Funny
1
Angry
0
Sad
0
Wow
0
