ಶಾಸಕ ಎ.ಎಸ್ ಪೊನ್ನಣ್ಣ ರವರ ಬಗ್ಗೆ ಅವಹೇಳನಕಾರಿ ಹಾಗೂ ಅವಾಚ್ಯ ಶಬ್ದ ಬಳಸಿ ನಿಂದನೆ: ಕಾಂಗ್ರೆಸ್ ಸಾಮಾಜಿಕ ಜಾಲತಾಣ ವತಿಯಿಂದ ದೂರು ದಾಖಲು
ಮಡಿಕೇರಿ; ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಸಂದೇಶವನ್ನು ರವಾನಿಸಿದವರ ವಿರುದ್ಧ ಇ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಸೂರಜ್ ಹೊಸೂರು, ಶಾಸಕರ ಮಾಧ್ಯಮ ಸಹಾಯ ಪೆಮ್ಮಂಡ ವಿನಿಲ್ ಸೋಮಣ್ಣ, ಯುವ ಕಾಂಗ್ರೆಸ್ಸಿನ ಸಿರಾಜ್ ಚೆರಿಯಪರಂಬು ಮತ್ತಿತರ ಉಪಸಿತರಿದ್ದರು.
