ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ "ವೋಟ್ ಅಧಿಕಾರ್ ಯಾತ್ರೆಯಲ್ಲಿ" ಭಾಗವಹಿಸಿದ ಶಾಸಕ ಎ‌ಎಸ್ ಪೊನ್ನಣ್ಣ

ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ "ವೋಟ್ ಅಧಿಕಾರ್ ಯಾತ್ರೆಯಲ್ಲಿ" ಭಾಗವಹಿಸಿದ ಶಾಸಕ ಎ‌ಎಸ್ ಪೊನ್ನಣ್ಣ

ಬಿಹಾರ:ಬಿಹಾರದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ವೋಟರ್ ಅಧಿಕಾರ ಯಾತ್ರೆ ಯಲ್ಲಿ ಭಾಗವಹಿಸಲು ಕರ್ನಾಟಕದಿಂದ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ನೇತೃತ್ವದಲ್ಲಿ ತೆರಳಿದ ಪ್ರಮುಖರು,ರಾಹುಲ್ ಗಾಂಧಿ ರವರೊಂದಿಗೆ ಈ ಐತಿಹಾಸಿಕ ಯಾತ್ರೆಯಲ್ಲಿ ಭಾಗವಹಿಸಿದರು. ‘ಓರ್ವ ವ್ಯಕ್ತಿಗೆ, ಒಂದು ಮತ’ ಸಿದ್ಧಾಂತಕ್ಕಾಗಿ ಹೋರಾಡುತ್ತಿರುವ ಕಾಂಗ್ರೆಸ್ ನೇತೃತ್ವದ ಮೈತ್ರಿ ಪಕ್ಷಗಳು, ಚುನಾವಣಾ ಆಯೋಗದ‘ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ರಣಕಹಳೆ ಮೊಳಗಿಸಿ, ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಮುಂದಾಳತ್ವದಲ್ಲಿ, ಬಿಹಾರದಾದ್ಯಂತ ಸುಮಾರು 1300 ಕಿ.ಮೀ ಪಾದಯಾತ್ರೆ ಮೂಲಕ ‘ವೋಟರ್ ಆಧಿಕಾರ ಯಾತ್ರಾ’ ಹಮ್ಮಿಕೊಂಡಿದೆ.

 ಈ ತಂಡದಲ್ಲಿ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್, ಸಚಿವರುಗಳಾದ ಕೆಜೆ ಜಾರ್ಜ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ಡಾ. ಎಂ.ಸಿ ಸುಧಾಕರ್, ಮುಖ್ಯಮಂತ್ರಿಗಳ ಕ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ವಿಧಾನಪರಿಷತ್ ಸದಸ್ಯರಾದ ಸಲೀಂ ಅಹಮದ್, ಬಿಕೆ ಹರಿಪ್ರಸಾದ್, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮೆಹರೊಜ್ ಖಾನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.