ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಡಿಕೇರಿ ದಸರಾ ಸಮಿತಿ

ಬೆಂಗಳೂರು:ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಮಡಿಕೇರಿ ದಸರಾ ಸಮಿತಿ ಪದಾಧಿಕಾರಿಗಳು,ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದರು.ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧ್ಯವಾದರೆ ಒಂದು ಮಡಿಕೇರಿ ದಸರಾ ಕಾರ್ಯಕ್ರಮಕ್ಕೆ ಬರುತ್ತೇನೆ,ಈ ಸಂಬಂಧ ಶಾಸಕ ಡಾ.ಮಂತರ್ ಗೌಡ ಅವರಿಗೆ ತಿಳಿಸುತ್ತೇನೆ ಎಂದರು.
ನಿಯೋಗದಲ್ಲಿ ಕಾರ್ಯಾಧ್ಯಕ್ಷರಾದ ಅರುಣ್ ಕುಮಾರ್,ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಉಪಾಧ್ಯಕ್ಷರಾದ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುನ್ ಶೆಟ್ಟಿ, ಖಜಾಂಜಿಗಳಾದ ಸಬಿತ, ಉಪಾಧ್ಯಕ್ಷರಾದ ಡಿಶು, ಕಾರ್ಯದರ್ಶಿಗಳಾದ ಕಾಣೆಹಿತ್ಲು ಮೊಣ್ಣಪ್ಪ , ಸಹ ಕಾರ್ಯದರ್ಶಿ ಮದ್ದುರಾಜು, ದಶಮಂಟಪ ಸಮಿತಿ ಅಧ್ಯಕ್ಷರಾದ ಹರೀಶ್ ಅನ್ವೇಕರ್, ವೇದಿಕೆ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್ ಆರ್ ಪಿ, ಅಗ್ರಿಕಲ್ಚರ್ ಯುನಿವರ್ಸಿಟಿ ಬೋರ್ಡ್ ಸದಸ್ಯರಾದ ಕಾವೇರಿಯಪ್ಪ ಇದ್ದರು