ಮಡಿಕೇರಿ: ದೇವಾಲಯಗಳಿಗೆ ಸಂಸದ ಯದುವೀರ್ ಒಡೆಯರ್ ಭೇಟಿ

ಮಡಿಕೇರಿ: ದೇವಾಲಯಗಳಿಗೆ ಸಂಸದ ಯದುವೀರ್ ಒಡೆಯರ್ ಭೇಟಿ

ಮಡಿಕೇರಿ: ನಾಡ ಹಬ್ಬ ಮಡಿಕೇರಿ ದಸರಾಗೂ ದಿನಗಣನೆ ಆರಂಭವಾಗಿದ್ದು ದಸರಾ ಕೆಲಸಗಳು ಒಂದೊದ್ದಾಗಿ ಆರಂಭವಾದ ಹಿನ್ನಲೆ ಇಂದು ಮಡಿಕೇರಿಯ ವಿವಿಧ ದೇವಾಲಯಗಳಿಗೆ ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕೋಟೆ ಮಾಹಾ ಗಣಪತಿ ದೇವಾಲಯದಿಂದ ಆರಂಭವಾದ ಪೂಜೆ ಓಂಕಾರೇಶ್ವರ ‌ನಾಲ್ಕು ಕರಗ ದೇವಾಲಯಗಳು ಹತ್ತು ದಶಮಂಟಪಗಳ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಂಸದರು ಹಿಂದೆ ನಡೆಸಿಕೊಂಡು ಬಂದ ರೀತಿಯಲ್ಲೆ ದಸಾರವನ್ನ ನಡೆಸಿಕೊಂಡು ಹೋಗಲಾಗುವುದು. ಈಗಾಲೆ ಮೈಸೂರಿನಲ್ಲೂ ದಸಾರ ಕೆಲಸಗಳು ಆರಂಭವಾಗಿದೆ.

ಮೈಸೂರಿನಲ್ಲೂ ಸಾಂಪ್ರದಾಯಿಕ ಪೂಜೆಗಳು ಆರಂಭವಾದ ಬಳಿಕ ಕೊಡಗು ದಸಾರಾದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನಲೆ ಮಡಿಕೇರಿ ದಸರ ಸಂಬಂದ ದೇವಾಲಹಗಳಲ್ಲಿ ಪೂಜೆ ಸಲ್ಲಿಸಿರುವುದಾಗಿ ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.