ಮಡಿಕೇರಿ ನಗರಸಭೆಯಲ್ಲಿ ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಮಾಡಿದ ಪ್ರಕರಣ:ಪೌರಾಯುಕ್ತ ರಾಮದಾಸ್ ಹಾಗೂ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮಕ್ಕೆ ಆದೇಶ

ಮಡಿಕೇರಿ ನಗರಸಭೆಯಲ್ಲಿ ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಮಾಡಿದ ಪ್ರಕರಣ:ಪೌರಾಯುಕ್ತ ರಾಮದಾಸ್ ಹಾಗೂ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮಕ್ಕೆ ಆದೇಶ

ಮಡಿಕೇರಿ: ಒಂದೇ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, SDPI ನಗರಸಭಾ ಸದಸ್ಯರಾದ ಅಮೀನ್ ಮೊಹಸಿನ್ ನೀಡಿದ್ದ ದೂರಿನ್ವಯ ತನಿಖೆ ಕೈಗೊಂಡಿದ್ದು, ತಪ್ಪು ಸಾಬೀತಾದ ಕಾರಣ ಜಿಲ್ಲಾಧಿಕಾರಿಗಳು ಪೌರಯುಕ್ತರಾದ ರಾಮದಾಸ್ ಹಾಗೂ ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಆದೇಶವನ್ನು ಹೊರಡಿಸಿದ್ದಾರೆ.

ಅಮೀನ್ ಮೊಹಿಸಿನ್ ನಗರಸಭಾ ಸದಸ್ಯರು, ವಾರ್ಡ್.07, ಮಡಿಕೇರಿ ಇವರ ದೂರು ಅರ್ಜಿಗೆ ಸಂಬಂಧಿಸಿದಂತೆ ಒಂದೇ ಬಿಲ್ಲಿಗೆ ಎರಡು ಬಾರಿ ಹಣ ಪಾವತಿಸಿರುವ ಬಗ್ಗೆ ಶ್ರೀ ಎಸ್.ವಿ ರಾಮದಾಸ್, ಹಿಂದಿನ ಪೌರಾಯುಕ್ತರು, ನಗರಸಭೆ, ಮಡಿಕೇರಿ (ಹಾಲಿ ಪೌರಾಯುಕ್ತರು, ನಗರಸಭೆ, ಚಾಮರಾಜನಗರ),ಶ್ರೀಮತಿ ಸೌಮ್ಯ ಕೆ. ಹಿಂದಿನ ಸಹಾಯಕ ಕಾರ್ಯಪಾಲಕ ಅಭಿಯಂತರರು(ಪರಿಸರ), ನಗರಸಭೆ, ಮಡಿಕೇರಿ (ಹಾಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು(ಪರಿಸರ), ನಗರಸಭೆ, ಹುಣುಸೂರು). ಶ್ರೀಮತಿ ಕೆ.ಬಿ ಸುಜಾತ, ಹಿಂದಿನ ಲೆಕ್ಕಾಧೀಕ್ಷಕರು (ಪ್ರಭಾರ), ನಗರಸಭೆ, ಮಡಿಕೇರಿ, (ಹಾಲಿ ಕಚೇರಿ ವ್ಯವಸ್ಥಾಪಕರು, ಪುರಸಭೆ, ವಿರಾಜಪೇಟೆ), ಶ್ರೀಮತಿ ಬಿ.ಆರ್ ಹರಿಣಿ, ದ್ವಿತೀಯ ದರ್ಜೆ ಸಹಾಯಕರು, ನಗರಸಭೆ, ಮಡಿಕೇರಿ ಈ ಮೇಲಿನ ನೌಕರರ ವಿರುದ್ಧ ಆರೋಪವು ಸಾಬೀತಾಗಿರುವುದರಿಂದ ಆಗಿರುವುದರಿಂದ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಆಪೀಲು) ನಿಯಮಗಳು 1957ರ ನಿಯಮ 8(iii)ರನ್ವಯ ಮುಂದಿನ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ (With Cumulative Effect) ತಡೆಹಿಡಿಯುವ ದಂಡನೆಯೊಂದಿಗೆ ಒಂದೇ ಬಿಲ್ಲಿಗೆ ಎರಡು ಬಾರಿ ಹಣ ಪಾವತಿಸಿರುವುದರಿಂದ ರೂ.6.320/- (ಆರು ಸಾವಿರದ ಮೂರು ನೂರ ಇಪ್ಪತ್ತು ಮಾತ್ರ)ಗಳ ಮೊತ್ತವನ್ನು ಪೌರಾಯುಕ್ತರು, ನಗರಸಭೆ, ಮಡಿಕೇರಿ ಇವರು ಮೇಲ್ಕಂಡ ಅಧಿಕಾರಿ/ನೌಕರರಿಂದ ವಸೂಲಿ ಮಾಡಿ ನಗರಸಭೆ ನಿಧಿಗೆ ಜಮಾ ಮಾಡಲು ಆದೇಶ ನೀಡಿದೆ.