ಸೆಪ್ಟೆಂಬರ್ 13ರಂದು ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‌ ಮಹಾಸಭೆ

ಸೆಪ್ಟೆಂಬರ್ 13ರಂದು ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‌ ಮಹಾಸಭೆ

ಮಡಿಕೇರಿ: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‌ನ 2024-25ನೇ ಸಾಲಿನ ಮಹಾಸಭೆ ಮಡಿಕೇರಿ ಕೊಡವ ಸಮಾಜದಲ್ಲಿ ಸೆ.13 ರಂದು ನಡೆಯಲಿದೆ ಎಂದು ಎಂದು ಬ್ಯಾಂಕಿನ ಆಧ್ಯಕ್ಷ ಜಿ.ಎಂ.ಸತೀಶ್ ಪೈ ತಿಳಿಸಿದರು. ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್‌ನಲ್ಲಿ ಪ್ರಸ್ತುತ 2,496 ಸದಸ್ಯರನ್ನು ಹೊಂದಿದೆ. ಅಲ್ಲದೇ, ಪ್ರಸಕ್ತ ಸಾಲಿನಲ್ಲಿ 41.22 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಸೆ.13ರಂದು ನಡೆಯಲಿರುವ ಬ್ಯಾಂಕ್‌ನ ಮಹಾಸಭೆಗೆ ಬ್ಯಾಂಕ್‌ನ ಸದಸ್ಯರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಬ್ಯಾಂಕ್‌ನ ದುಡಿಯುವ ಬಂಡವಾಳ 54.41 ಕೋಟಿ ರೂ. ಆಗಿದೆ. 48.67 ಕೋಟಿ ರೂ. ವಿವಿಧ ಠೇವಣಾತಿಗಳನ್ನು ಹೊಂದಿದೆ. ಗ್ರಾಹಕರಿಗೆ ಮನೆ ಖರೀದಿ ಸಾಲ, ಜಾಮೀನು ಸಾಲ, ವಾಹನ ಸಾಲ, ಆಭರಣ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ ನೀಡುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷರಾದ ನಾಗೇಶ್, ನಿರ್ದೇಶಕರಾದ ಸಿ.ಕೆ.ಬಾಲಕೃಷ್ಣ, ಗಿರೀಶ್, ಬಿ.ಕೆ.ಜಗದೀಶ್, ರಾಜೇಶ್ ಉಪಸ್ಥಿತರಿದ್ದರು.