ಎಸ್ ಎಸ್ ಎಫ್ ರಾಜ್ಯಮಟ್ಟದ ಸಾಹಿತ್ಯೋತ್ಸವಕ್ಕೆ ಚೆರಿಯಪರಂಬುವಿನ ಮನ್ಸೂರ್ ಆಯ್ಕೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು : ಜಿಲ್ಲಾ ಎಸ್ ಎಸ್ ಎಫ್ ವತಿಯಿಂದ ಕಡಂಗದಲ್ಲಿ ಆಯೋಜಿಸಲಾದ ಜಿಲ್ಲಾಮಟ್ಟದ ಸಾಹಿತ್ಯೋತ್ಸವದ ಜೂನಿಯರ್ ವಿಭಾಗದ ಕನ್ನಡ ರೀಡಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನಾಪೋಕ್ಲು ಬಳಿಯ ಚೆರಿಯಪರಂಬುವಿನ ಸಿ.ಯು.ಮನ್ಸೂರ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮನ್ಸೂರ್ ನಾಪೋಕ್ಲು ಬೇತು ಚೆರಿಯಪರಂಬು ಗ್ರಾಮದ ನಿವಾಸಿ ಸಿ.ಎಂ. ಉಸ್ಮಾನ್, ಆಬಿದಾ ದಂಪತಿಗಳ ಪುತ್ರ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತುರ್ಕಳಿಕೆಯಲ್ಲಿ ಸೆ.26ರಿಂದ 28ರವರೆಗೆ ನಡೆಯಲಿರುವ ರಾಜ್ಯಮಟ್ಟದ ಸಾಹಿತ್ಯೋತ್ಸವ ಸ್ಪರ್ಧೆಯಲ್ಲಿ ಮನ್ಸೂರ್ ಭಾಗವಹಿಸಲಿದ್ದಾರೆ.