ಬಿಹಾರ್ ಎನ್.ಡಿ.ಎ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು:ವಿರಾಜಪೇಟೆಯಲ್ಲಿ ಬಿಜೆಪಿ ಸಂಭ್ರಮಾಚರಣೆ

ಬಿಹಾರ್ ಎನ್.ಡಿ.ಎ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು:ವಿರಾಜಪೇಟೆಯಲ್ಲಿ ಬಿಜೆಪಿ ಸಂಭ್ರಮಾಚರಣೆ

ವಿರಾಜಪೇಟೆ: ಬಿಹಾರ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಎನ್.ಡಿ.ಎ.ಭರ್ಜರಿ ಗೆಲುವ ಸಾಧಿಸಿದ ಹಿನ್ನೆಲೆ ವಿರಾಜ ನಗರ ಭಾ.ಜ.ಪ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ನಗರದ ಗಡಿಯಾರ ಕಂನದ ಬಳಿ ನಗರದ ಭಾ.ಜ.ಪ ಅದ್ಯಕ್ಷರಾದ ಅಂಜಪರುವಂಡ ಅನಿಲ್ ಮಂದಣ್ಣ ನೇತೃತ್ವದಲ್ಲಿ ಭಾ.ಜ.ಪ ಕಾರ್ಯಕರ್ತರು ಸಿಹಿ ಹಂಚಿ,ಪಠಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್ ಅವರು,ಕುಟುಂಬ ರಾಜಕಾರಣದಿಂದ ಬಿಹಾರ್ ರಾಜ್ಯ ಜನತೆ ಬೇಸತ್ತಿದೆ. ಕಾಂಗ್ರೆಸ್ ವೋಟ್ ಚೋರಿ ಹೆಸರಿನಲ್ಲಿ ಅಪಪ್ರಚಾರ ಮಾಡಿ ನಾಗರಿಕರನ್ನು ಧಿಕ್ಕು ತಪ್ಪಿಸುವ ಪ್ರಯತ್ನ ಮಾಡಿದೆ. ಆದರೆಎ ಪ್ರಜ್ಞಾವಂತ ನಾಗರಿಕರು ಎನ್.ಡಿ.ಎ. ಗೆ ಮೈತ್ರಿಕೂಟದ ಅಭ್ಯರ್ಥಿಗಳನ್ನು ಬಹುಮತದೊಂದಿಗೆ ಆಯ್ಕೆಗೊಳಿಸಿ ಮತ್ತೊಮ್ಮೆ ಭಾ.ಜ.ಪ ವನ್ನು ಗೆಲ್ಲಿಸಿದೆ. ಇದು ಭಾ.ಜ.ಪ ಕಾರ್ಯಕರ್ತರ ಗೆಲುವಾಗಿದೆ. ಭಾ.ಜ.ಪ. ವು ಬಿಹಾರ್ ಜನತೆಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದು ಹೇಳಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ ಅವರು ಮಾತನಾಡಿ, ಬಿಹಾರ್ ರಾಜ್ಯ ನಡೆದ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟವು ಜಯಸಾಧಿಸಿದೆ. ಕಾಂಗ್ರೆಸ್ ಪಕ್ಷದ ಪಿತೂರಿ ರಾಜಕಾರಣವನ್ನು ಜನತೆ ತಿರಸ್ಕಾರ ಮಾಡಿದೆ.ಒಡೆದು ಆಳುವ ನೀತಿಗೆ ತಿಲಾಂಜಲಿ ಸಲ್ಲಿಸಿದೆ. ಜನಪರ, ಜನಹಿತ ಕಾರ್ಯಕ್ರಮಗಳೆ ಭಾ.ಜ.ಪ ಕ್ಕೆ ಶ್ರೀರಕ್ಷೆಯಾಯಿತು. ಇದು ಮುಂದೆ ನಡೆಯುವ ಎಲ್ಲಾ ಚುನಾವಣೆಗೆ ಮುನ್ನುಡಿಯಾಗಿದೆ ಎಂದು ಹೇಳಿದರು.

 ಕಾರ್ಯಕ್ರಮದ ಮೊದಲಿಗೆ ದೇಶದ ರಾಜಧಾನಿಯಾದ ಡೆಲ್ಲಿಯಲ್ಲಿ ನಡೆದ ಬೀಕರ ಬಾಂಬ್ ಸ್ಪೋಟದಲ್ಲಿ ನಿಧನರಾದ ವ್ಯಕ್ತಿಗಳಿಗೆ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಕಾರ್ಯಕರ್ತರು ಸಿಹಿ ಹಂಚಿ ಪಠಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡಿದರು.

ನಗರ ಭಾ.ಜ.ಪ ಅದ್ಯಕ್ಷ ಅನೀಲ್ ಮಂದಣ್ಣ, ಪಕ್ಷ ಪ್ರಮುಖರಾದ ಪಟ್ರಪಂಡ ರಘು ನಾಣಯ್ಯ, ಸುನಿತಾ, ಕೂತಂಡ ಸಚಿನ್ ಕುಟ್ಟಯ್ಯ, ಸಾಯಿನಾಥ್ ನಾಯಕ್, ಪ್ರದೀಪ್ ರೈ, ವಕೀಲ ಪಿ.ಎ. ಪೊನ್ನಣ್ಣ, ಹಾಗೂ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

 ವರದಿ;ಕಿಶೋರ್ ಕುಮಾರ್ ಶೆಟ್ಟಿ