ಬೆಂಗಳೂರು ಪ್ರೆಸ್‌ ಕ್ಲಬ್ ನಿಂದ ಎ.ಎಸ್ ಪೊನ್ನಣ್ಣ ಅವರೊಂದಿಗೆ ‌ಮಾಧ್ಯಮ ಸಂವಾದ

ಬೆಂಗಳೂರು ಪ್ರೆಸ್‌ ಕ್ಲಬ್ ನಿಂದ ಎ.ಎಸ್ ಪೊನ್ನಣ್ಣ ಅವರೊಂದಿಗೆ ‌ಮಾಧ್ಯಮ ಸಂವಾದ

ಬೆಂಗಳೂರು: ಪ್ರೆಸ್ ಕ್ಲಬ್ ಆವರಣದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರೊಂದಿಗೆ ಮಾಧ್ಯಮ ಸಂವಾದ ಕಾರ್ಯಕ್ರಮ ನಡೆಯಿತು. ದೇಶದ, ರಾಜ್ಯದ ಹಾಗೂ ಕೊಡಗಿನ ಪ್ರಸಕ್ತ ರಾಜಕೀಯ ಹಾಗೂ ಇತರ ವಿಷಯಗಳ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಶಾಸಕರು ಉತ್ತರಿಸುತ್ತಾ ಚರ್ಚೆಯಲ್ಲಿ ಭಾಗವಹಿಸಿದರು.

ಪ್ರಮುಖವಾಗಿ ದೇಶದಲ್ಲಿ ಸಂಚಲನ ಮೂಡಿಸಿರುವ ಮತಗಳ್ಳತನದ‌ವಿಷಯದ ಬಗ್ಗೆ ವಿವರವಾಗಿ ಶಾಸಕರು ತಿಳಿಸಿದರು. ಬಳಿಕ ಪತ್ರಕರ್ತರು ಉತ್ತರ ಬಯಸಿದ ಧರ್ಮಸ್ಥಳ ಪ್ರಕರಣ, ಅರಣ್ಯ ಸಮಸ್ಯೆ, ರಸ್ತೆಗಳ ಸಮಸ್ಯೆ, ಕಾಂಗ್ರೆಸ್ ಸರಕಾರ ಬಂದ ಬಳಿಕ ಶಾಸಕರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ನಿರ್ವಹಿಸಿದ ಜವಾಬ್ದಾರಿಗಳು ಹಾಗೂ ಎದುರಿಸಿದ ಸವಾಲುಗಳ ಬಗ್ಗೆ, ಕೊಡಗಿನ ಯುವಜನತೆಗೆ ಕ್ರೀಡೆಯ ಬಗ್ಗೆ ಶಾಸಕರು ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.

ಎಲ್ಲದಕ್ಕೂ ಸಮರ್ಪಕವಾಗಿ ಉತ್ತರಿಸಿದ ಶಾಸಕರು, ಆರಂಭದಲ್ಲಿ ತಾವು ರಾಜಕೀಯ ಪ್ರವೇಶಿಸುವ ಮೊದಲು ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಸುಮಾರು ಒಂದು ತಾಸಿಗೂ ಅಧಿಕ ಅವಧಿ ನಡೆದ ಈ ಸಂವಾದ ಕಾರ್ಯಕ್ರಮದ ಬಳಿಕ ಬೆಂಗಳೂರು ಪತ್ರಕರ್ತರ ವತಿಯಿಂದ ಶಾಸಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.