ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಹ್ಯಾಂಡ್ ಬಾಲ್ ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ

ಕುಶಾಲನಗರ: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರೌಢಶಾಲೆಯ ವಿಭಾಗದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಪ್ರಾಂಶುಪಾಲೆ ಭಾರತಿ ಕೆ. ಮಕ್ಕಳಿಗೆ ಶುಭ ಹಾರೈಸಿದ್ದಾರೆ. ಇದೇ ಸಂದರ್ಭ ಶಾಲಾ ಶಿಕ್ಷಕರು ಮಂಜು, ದಿನೇಶ ಚಾರಿ, ನಾಗೇಂದ್ರ, ದೊಡ್ಡಯ್ಯ, ನಿಲಯ ಪಾಲಕರಾದ ಜಗದೀಶ್, ನರ್ಸ್ ಮೀನಾ, ತ್ರಿವೇಣಿ, ಕವಿತಾ, ಪಾರ್ವತಿ, ಅಶ್ವತಿ, ನಮೃತ, ಅಂಕಿತ, ಹರಿಣಾಕ್ಷಿ, ಪೋಷಕ ಸಮಿತಿ ಸದಸ್ಯೆ ರುಬೀನಾ ಎಂ.ಎ, ಶಾಲಾ ಸಿಬ್ಬಂದಿ ಅರುಣ್ ಕುಮಾರ್, ಸಂತೋಷ್ ಹಾಜರಿದ್ದರು.