ನಾಡಪ್ರಭು ಪತ್ತಿನ ಸಹಕಾರ ಸಂಘಕ್ಕೆ 24.56 ಲಕ್ಷ ಲಾಭ: ಸೆ.13 ರಂದು ವಾರ್ಷಿಕ ಮಹಾಸಭೆ

ಕುಶಾಲನಗರ: ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ಮಹಾಸಭೆಯು ಸೆ.೧೩ ರಂದು ನಡೆಯಲಿದ್ದು, ಎಲ್ಲಾ ಸದಸ್ಯರು ಮಹಾಸಭೆಗೆ ಪಾಲ್ಗೊಳ್ಳಬೇಕು ಎಂದು ನಾಡಪ್ರಭು ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎಂ.ಕೆ.ದಿನೇಶ್ ಹೇಳಿದರು. ಕುಶಾಲನಗರದ ನಾಡಪ್ರಭು ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಡಪ್ರಭು ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ೨೪.೫೯ ಲಕ್ಷ ಲಾಭವನ್ನು ಗಳಿಸಿದ್ದು, ಇದಕ್ಕೆ ಸಹಕರಿದ ಸಂಘದ ಸದಸ್ಯರಿಗೆ, ಆಡಳಿತ ಮಂಡಳಿಗೆ ಧನ್ಯವಾದಗಳು ಎಂದರು.
ಹಾಗೆಯೇ ಸಂಘದಲ್ಲಿ ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಸಾಲ ಸೇರಿದಂತೆ ಇನ್ನಿತರ ಸಾಲಗಳು ಸಂಘದಲ್ಲಿ ನೀಡಲಾಗುತ್ತಿದೆ. ಇದನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳಬೇಕು. ಅಲ್ಲದೇ ಸಂಘದ ಸೌಲಭ್ಯವನ್ನು ವಿಸ್ತರಿಸುವ ಸಲುವಾಗಿ ಈ ಬಾರಿ ಗೃಹ ಸಾಲ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಮಹಾಸಭೆಯಲ್ಲಿ ಈ ಬಗ್ಗೆ ಸದಸ್ಯರ ಅಭಿಪ್ರಾಯಯನ್ನು ಪಡೆದು ಮುಂದುವರೆಯಲಾಗುವುದು ಎಂದರು. ಸಂಘದಲ್ಲಿ ೨.೫೪ ಕೋಟಿ ಠೇವಣಿಯಿದ್ದು, ಸದಸ್ಯರು ಹಾಗೂ ಸದಸ್ಯೇತರಿಂದ ಠೇವಣಿ ಸಂಗ್ರಹಿಸಲು ಕೋರಲಾಗಿದೆ. ಸಂಘದ ದುಡಿಯುವ ಬಂಡವಾಳ ೪.೦೧ ಕೋಟಿಯಿರುತ್ತದೆ ಎಂದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಜಿ.ಬಿ.ಜಗದೀಶ್ ಹಾಗೂ ನಿರ್ದೇಶಕರು ಇದ್ದರು.