ನಾಪೋಕ್ಲು: ಕಕ್ಕುಂದ ಕಾಡು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

ನಾಪೋಕ್ಲು:  ಕಕ್ಕುಂದ ಕಾಡು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು : ನಿತ್ಯ ಜೀವನದಲ್ಲಿ ಪ್ರತಿಯೊಬ್ಬರೂ ಪೌಷ್ಟಿಕ ಆಹಾರಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಯೋಜನಾಧಿಕಾರಿಗಳಾದ ಶೀಲಾ ಅಶೋಕ್ ರವರು ಅಭಿಪ್ರಾಯಪಟ್ಟರು.

 ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕುಂದಕಾಡು ಅಂಗನವಾಡಿ ಕೇಂದ್ರದಲ್ಲಿಆಯೋಜಿಸಲಾದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತಹೀನತೆ ,ಅಪೌಷ್ಟಿಕತೆ ಯನ್ನು ತಡೆಗಟ್ಟಬೇಕು. ನಾವೆಲ್ಲರೂ ಪೌಷ್ಟಿಕತೆಯ ಆಹಾರ ಸೇವಿಸಬೇಕು,ಸ್ಥಳೀಯವಾಗಿ ಸಿಗುವ ಸೊಪ್ಪು,ಹಣ್ಣುಗಳು, ತರಕಾರಿಗಳು ಸ್ವಚ್ಛತೆಯಿಂದ ಕೂಡಿದ್ದು ಯಥೇಚ್ಚವಾಗಿ ಪೌಷ್ಟಿಕತೆಯನ್ನು ಹೊಂದಿರುತ್ತದೆ.

 ಆದ್ದರಿಂದ ಪ್ರತಿಯೊಬ್ಬರೂ ಪೌಷ್ಟಿಕ ಆಹಾರ ಬಳಕೆಯನ್ನು ನಿತ್ಯ ಜೀವನದಲ್ಲಿ ರೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಅದರಂತೆ ಮಾತೃವಂದನ,ಭಾಗ್ಯ ಲಕ್ಷ್ಮಿ ಹಾಗು ಪೋಷಣ್ ಟ್ರಾಕರ್ ನಲ್ಲಿ ಫಲಾನುಭವಿಗಳ ಪೋಟೋ ಕ್ಯಾಪ್ಚರ್ ಕಡ್ಡಾಯವಾಗಿ ಮಾಡುವಂತೆ ತಿಳಿಸಿದರು.

 ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆ ಉಮಾಮಹೇಶ್ವರಿ ಅವರು ಮಾತನಾಡಿ ಗರ್ಬಿಣಿ ,ಬಾಣಂತಿ ಹಾಗೂ ಮಕ್ಕಳು ಚುಚ್ಚುಮದ್ದು ಗಳನ್ನು ಸರಿಯಾದ ಸಮಯಕ್ಕೆ ಹಾಕಿಸಿಕೊಳ್ಳಬೇಕು. ಆಧಾರ್ ಕಾರ್ಡ್,ಬ್ಯಾಂಕ್ ಖಾತೆ ಪುಸ್ತಕ ದಾಖಲಾತಿಗಳು ಇದ್ದಾಗ ಮಾತ್ರ ಸರ್ಕಾರದ ಸೌಲಭ್ಯ ಪಡೆಯುವುದಕ್ಕೆ ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಪೌಷ್ಟಿಕ ಆಹಾರ ಪದಾರ್ಥಗಳ ಪ್ರದರ್ಶನ ನಡೆಸಲಾಯಿತು.

 ಈ ಸಂದರ್ಭ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಆಶಲತಾ,ಆಶಾ ಕಾರ್ಯಕರ್ತೆ ಚಂದ್ರಕಲಾ,ಸಹಾಯಕಿ ರಾಧ, ನಾಪೋಕ್ಲು ವರ್ತುಲದ ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು,ಪೋಷಕರು,ಮಕ್ಕಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಆಶಾಲತಾ ಸ್ವಾಗತಿಸಿ, ಸರ್ವರನ್ನು ವಂದಿಸಿದರು.