ನಾಪೋಕ್ಲು:ಪತ್ನಿಗೆ ಕಿರುಕುಳ ‌ಆರೋಪ,ಪತಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ನಾಪೋಕ್ಲು:ಪತ್ನಿಗೆ ಕಿರುಕುಳ ‌ಆರೋಪ,ಪತಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ನಾಪೋಕ್ಲು:ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು ಗ್ರಾಮದಲ್ಲಿ ಪತ್ನಿಗೆ ನಿರಂತರ ಕಿರುಕುಳ ‌ನೀಡುತ್ತಿರುವ ಆರೋಪದಡಿ ಪತಿ ಸೇರಿದಂತೆ ಐವರ ವಿರುದ್ಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

 ಚೆರಿಯಪರಂಬು ಗ್ರಾಮದ ನಿವಾಸಿ ನಸೀಮತ್ ಅರ್ಫಾನ ಎಂಬ ಗೃಹಿಣಿ ನೀಡಿದ ದೂರಿನ ಅನ್ವಯ ಪತಿ ಹಾಶಿಮ್, ಅತ್ತೆ, ಅತ್ತಿಗೆ, ನಾದಿನಿ ಹಾಗೂ ಮತ್ತೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಚೆರಿಯಪರಂಬು ಗ್ರಾಮದ ನಿವಾಸಿ ಹಾಶಿಮ್ ಎಂಬಾತ ಕಲ್ಲುಗುಂಡಿಯ ನಸೀಮತ್ ಅರ್ಫಾನ ಎಂಬುವವರನ್ನು ಕಳೆದ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು.

ಒಂದು ವರ್ಷಗಳ ಕಾಲ ಅನ್ನೋನ್ಯವಾಗಿದ್ದ ದಂಪತಿ ಬಳಿಕ ಪತಿ ಹಾಶಿಮ್ ನನಗೆ ನಿರಂತರ ಕಿರುಕುಳ ನೀಡುತ್ತಾ ಬಂದಿರುತ್ತಾರೆ ಎಂದು ಅರ್ಫಾನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಠಾಣೆಯಿಂದ ಆಪ್ತ ಸಮಾಲೋಚನೆಗೆ ಮಡಿಕೇರಿಯ ಸಖಿ ಕೇಂದ್ರಕ್ಕೆ ಕೌನ್ಸೆಲಿಂಗ್‌ಗೆ ಕಳುಹಿಸಿರುತ್ತಾರೆ.

ಆದರೆ, ಅಲ್ಲೂ ಪ್ರಕರಣ ಇತ್ಯರ್ಥವಾಗದೆ ಮನೆಗೆ ಹಿಂತಿರುಗಿದ ಅರ್ಫಾನಳಿಗೆ ಮನೆ ಸೇರದಂತೆ ತಡೆದು ಕಿರುಕುಳ ನೀಡಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ ಕಾರಣಕ್ಕೆ ಪತಿ ಹಾಶಿಮ್ ಸೇರಿದಂತೆ ಕುಟುಂಬದ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.