ನೆಲ್ಲಿಹುದಿಕೇರಿ:ಗೂಡಂಗಡಿ ಬೆಂಕಿಗೆ ಆಹುತಿ

ನೆಲ್ಲಿಹುದಿಕೇರಿ:ಗೂಡಂಗಡಿ ಬೆಂಕಿಗೆ ಆಹುತಿ

ಸಿದ್ದಾಪುರ: ನೆಲ್ಲಿಹುದಿಕೇರಿ ಒಂಟಿ ಅಂಗಡಿ ಸಂಪರ್ಕ ಕಲ್ಪಿಸುವ, ಗ್ರೀನ್ ನರ್ಸರಿ ಸಮೀಪದ ರಸ್ತೆ ಬದಿಯಲ್ಲಿ ಗೂಡಂಗಡಿಗೆ ಬೆಂಕಿ ತಗುಲಿ ಸುಟ್ಟು ಹೋಗಿದೆ.ಭಾನುವಾರ ರಾತ್ರಿ 11.40 ರ ಸಮಯದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ.ಗೂಡ್ಸ್ ಗಾಡಿಯನ್ನು ಗೂಡಂಗಡಿಯಾಗಿ ಮಾಡಿಕೊಂಡು,ಗಂಡ-ಹೆಂಡತಿ ಟೀ ವ್ಯಾಪಾರ ನಡೆಸುತ್ತಿದ್ದರು.ಕೆಲ ತಿಂಗಳುಗಳ ಹಿಂದೆ ಇದೇ ಗೂಡಂಗಡಿಯನ್ನು ಅತ್ತಿಮಂಗಲ ಜಂಕ್ಷನ್ ನಲ್ಲಿ ಕಾಡಾನೆ ದಾಳಿ ಮಾಡಿ ಹಾನಿ ಪಡಿಸಿತು. ಅಗ್ನಿ ಅನಾಹುತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.