ಕಣ್ಣಂಗಾಲ ಗ್ರಾಮದಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ನೂತನ ಕಾಂಕ್ರೀಟ್ ರಸ್ತೆ ಕಾಮಗಾರಿ ‌ಪೂರ್ಣ

ಕಣ್ಣಂಗಾಲ  ಗ್ರಾಮದಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರ ಅನುದಾನದಲ್ಲಿ ನೂತನ ಕಾಂಕ್ರೀಟ್ ರಸ್ತೆ ಕಾಮಗಾರಿ ‌ಪೂರ್ಣ

ವಿರಾಜಪೇಟೆ: ತಾಲೂಕಿನ ಕಣ್ಣಂಗಾಲ ಗ್ರಾಮದ ಮಚ್ಚಾರಂಡ ಜಯ ಪೂಣಚ್ಚ, ಸೋಮಣ್ಣ, ರಾಬಿನ್ ಚಿಣ್ಣಪ್ಪ ಹಾಗೂ ಐಚಂಡ ಕುಟುಂಬಸ್ಥರ ಮನೆಗಳಿಗೆ ಹೋಗುವ ರಸ್ತೆಗೆ 57 ಮೀಟರ್ ಕಾಂಕ್ರಿಟ್ ರಸ್ತೆಯನ್ನು ನಿರ್ಮಿಸಿಸಲು ಅನುದಾನ ಒದಗಿಸಿರುವ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರಿಗೆ ಹಾಗೂ ಸಹಕಾರ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ರವರಿಗೂ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ ರವರಿಗೂ ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ವಲಯ ಅಧ್ಯಕ್ಷರು ಮಚ್ಚಾರಂಡ ಕಿರಣ್ ರವರಿಗೆ ಬೇರೆರ ಕಿರಣ್ ಶಿವಪ್ಪ, ಚೆಂಬಂಡ ಡಿಲ್ಲು ನಾಣಯ್ಯ, ಟಿ. ವಿ. ಗಣೇಶ್, ಮಚ್ಚಾರಂಡ ಜಯ ಪೂಣಚ್ಚ, ಸೋಮಣ್ಣ, ರಾಬಿನ್ ಚಿಣ್ಣಪ್ಪ, ಸ್ಥಳೀಯರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.