ದೇವಣಗೇರಿಯಲ್ಲಿ‌ ನೂತನ ರಸ್ತೆ ಉದ್ಘಾಟನೆ:ಜನಸಾಮಾನ್ಯರಿಗೆ ರಸ್ತೆ ಸಂಪರ್ಕವು ಮೂಲಭೂತ ಬೇಡಿಕೆಯಾಗಿದೆ:ಶಾಸಕ ಎ‌ಎಸ್ ಪೊನ್ನಣ್ಣ

ದೇವಣಗೇರಿಯಲ್ಲಿ‌ ನೂತನ ರಸ್ತೆ ಉದ್ಘಾಟನೆ:ಜನಸಾಮಾನ್ಯರಿಗೆ ರಸ್ತೆ ಸಂಪರ್ಕವು ಮೂಲಭೂತ ಬೇಡಿಕೆಯಾಗಿದೆ:ಶಾಸಕ ಎ‌ಎಸ್ ಪೊನ್ನಣ್ಣ

ವಿರಾಜಪೇಟೆ:ತಾಲೂಕಿನ ಚೆಂಬೆಬೆಳ್ಳೂರು ಗ್ರಾಮದ ದೇವಣಗೇರಿಯಲ್ಲಿ ನಿರ್ಮಾಣವಾದ ನೂತನ ರಸ್ತೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಲೋಕಾರ್ಪಣೆ ಮಾಡಿದರು.

 ಉದ್ಘಾಟನೆ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಜನಸಾಮಾನ್ಯರಿಗೆ ರಸ್ತೆ ಸಂಪರ್ಕವು ಮೂಲಭೂತ ಬೇಡಿಕೆಯಾಗಿದ್ದು, ಇದನ್ನು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಆದಷ್ಟು ನಾಡಿನ ಮೂಲೆ ಮೂಲೆಯಲ್ಲಿ ಅಭಿವೃದ್ಧಿಪಡಿಸಲು ಪ್ರಯತ್ನಿಸುವುದಾಗಿ ಹೇಳಿದರು. ಅದೇ ರೀತಿ ಜನರು ಸಹ ಉತ್ತಮ ಕೆಲಸಗಳಿಗೆ ಸಹಕಾರ ನೀಡಬೇಕೆಂದು ತಾನು ಬಯಸುವುದಾಗಿ ತಿಳಿಸಿದರು. ಈ ರಸ್ತೆಯು ಅಂದಾಜು ₹ 10 ಲಕ್ಷಗಳಲ್ಲಿ ನಿರ್ಮಾಣವಾಗಿದ್ದು, ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ದೇವಣಗೇರಿ ವಲಯ ಅಧ್ಯಕ್ಷರಾದ ಈಚಂಡ ಕರ್ಣ,ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಹನೀಫ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ರಫೀಕ್, ಅಬ್ದುಲ್ಲ ಹಾಜಿ, ಉಸ್ಮಾನ್, ಪಂಚಾಯಿತಿ ಸದಸ್ಯರಾದ ಆಸ್ಫಕ್, ಪಕ್ಷದ ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.