ಆನೆಯಲ್ಲ ಹಂದಿ.... ಸೊಂಡಿಲಿನೊಂದಿಗೆ ವಿಚಿತ್ರ ಆಕಾರದ ಹಂದಿಮರಿ ಜನನ

ಆನೆಯಲ್ಲ ಹಂದಿ.... ಸೊಂಡಿಲಿನೊಂದಿಗೆ ವಿಚಿತ್ರ ಆಕಾರದ ಹಂದಿಮರಿ ಜನನ

ಮಡಿಕೇರಿ:ಗಾಳಿಬೀಡು ಗ್ರಾಮದ ಬೋಜಕಿ ಹಾಗೂ ಗಣೇಶ ಅವರು ಸಾಕಿದ ಹಂದಿಯು ಶನಿವಾರ ದಿನ ಮರಿಗೆ ಜನ್ಮ ನೀಡಿದೆ. ಮರಿಗಳ ಪೈಕಿ ವಿಚಿತ್ರ ಆಕಾರದ ಒಂದು ಮರಿಗೆ ಜನ್ಮ ನೀಡಿದೆ. ತಲೆ ಮೇಲೆ ಸೊಂಡಿಲು,ಸೊಂಡಿಲಿನ ಕೆಳಗೆ ದೊಡ್ಡದಾದ ಒಂದೇ ಕಣ್ಣು ಹಾಗೂ ಅದರೊಳಗೆ ಇನ್ನೊಂದು ಕಣ್ಣು, ಮನುಷ್ಯನ ಆಕಾರದ ನಾಲಿಗೆ , ಉಗುರಿನ ಬಣ್ಣದಲ್ಲಿ ಬದಲಾವಣೆ ಇತ್ತು. ಮೈಯ ಮೇಲೆ ಕೂದಲು ಕೂಡ ಇರಲಿಲ್ಲ ಎಂದು ಗಣೇಶ ಅವರು ತಿಳಿಸಿದ್ದಾರೆ. 20 ನಿಮಿಷದ ನಂತರ ವಿಚಿತ್ರ ಆಕಾರದ ಹಂದಿಮರಿ ಮೃತಪಟ್ಟಿತ್ತು.