ಪೋಷಕರು ಮಕ್ಕಳ ಪ್ರತಿಭೆ ಗುರುತಿಸಿ ವೇದಿಕೆ ಕಲ್ಪಿಸುವಂತಾಗಬೇಕು: ಮೊಹಮ್ಮದ್ ರಾಫಿ

ಪೋಷಕರು ಮಕ್ಕಳ ಪ್ರತಿಭೆ ಗುರುತಿಸಿ ವೇದಿಕೆ ಕಲ್ಪಿಸುವಂತಾಗಬೇಕು: ಮೊಹಮ್ಮದ್ ರಾಫಿ

ವಿರಾಜಪೇಟೆ: ಮಕ್ಕಳಲ್ಲಿ ಬಹುಮುಖ ಪ್ರತಿಭೆಗಳು ಅಡಗಿದ್ದು,ಪ್ರತಿಭೆಯನ್ನು ಗುರತಿಸುವುದು ಪೋಷಕರ ಕರ್ತವ್ಯವಾಗಬೇಕು ಮತ್ತು ವೇದಿಕೆಯಲ್ಲಿ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮಾಜಿ ಪುರಸಭೆಯ ಸದಸ್ಯ ಮೊಹಮ್ಮದ್ ರಾಫಿ ಅವರು ಅಭಿಮತ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು ಮತ್ತು ಸಾಧಿಕ್ ಆರ್ಟ್ಸ್ ಲಿಂಕ್ ವಿರಾಜಪೇಟೆ ಜಂಟಿ ಆಶ್ರಯದಲ್ಲಿ ಕಲಾ ಉತ್ಸವ ಕೊಡಗು 2025ರ ಅಂಗವಾಗಿ ಪುರ ಭವನದಲ್ಲಿ ವಿವಿಧ ಜನಪದ ಕಲಾ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹೂವಿನ ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೊಹಮ್ಮದ್ ರಾಫಿ ಅವರು. 

ಕಲೆಗಳು ತಾನಾಗಿ ಬರುವಂತಹದ್ದು, ಅದನ್ನು ಗ್ರಹಿಸಿ, ಗುರುತಿಸಬೇಕು ಮತ್ತು ಪ್ರೋತ್ಸಾಹಿಸಬೇಕು. ಪೋಷಕರು ಮಕ್ಕಳಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಬಾಲ್ಯದಲ್ಲೇ ಗುರುತಿಸಿ ಕಾರ್ಯಕ್ರಮಗಳ ವೇದಿಕೆಗೆ ಕರೆತರುವಂತಹ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ಪ್ರತಿಭೆಗಳನ್ನು ಸಮಾಜವು ಗುರುತಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.

ಕಲಾವಿದ ಶ್ರೇಯಸ್ಸ್ ಭಟ್ ಅವರು ಮಾತನಾಡಿ,ಕೆಲವು ಸಂಧರ್ಭದಲ್ಲಿ ಮಕ್ಕಳಲ್ಲಿ ಪ್ರತಿಭೆಗಳಿದ್ದರು ಗುರುತಿಸಲಾರದೇ ಕಲೆಯು ಚಿಗುರಿನಲ್ಲೆ ಕೊನೆಯಾಗುತ್ತದೆ. ಎಲ್ಲಾ ವ್ಯಕ್ತಿಗಳಲ್ಲಿ ಕಣ್ಣಿಗೆ ಕಾಣದ ಪ್ರತಿಭೆಗಳಿರುತ್ತದೆ. ಗುರುತಿಸಿದಲ್ಲಿ ಮಾತ್ರ ಪ್ರತಿಭೆ ಅನಾವರಣವಾಗಲು ಸಾಧ್ಯ. ಆಯೋಜಿತ ಕಾರ್ಯಕ್ರಮಗಳಿಗೆ ಲೆಕ್ಕವಿಲ್ಲ.ಆಸರೆ ಕಲೆ ಪ್ರದರ್ಶನಕ್ಕೆ ಸ್ವತಾ: ಮುಂದಾಗಬೇಕು. ಕಲೆ ಪ್ರದರ್ಶನವಾಗಬೇಕು ಸಮಾಜ ಗುರುತಿಸುವಂತಾಗಬೇಕು ಎಂದು ಹೇಳಿದರು.

ಉದ್ಯಮಿ ಇಸ್ಮಾಯಿಲ್ ಪಿ.ಕೆ, ನಾಯಜ್, ವಿಶಾಲಾಕ್ಷಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಕಲಾ ಉತ್ಸವ ಕೊಡಗು ಅಯೋಜಕಾದ ಸಾಧಿಕ್ ಹಂಸ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ನಾಟ್ಯ ಮಯೂರಿ ನೃತ್ಯ ಶಾಲೆ, ಇಂಟೋಪಿಯಸ್ ನೃತ್ಯ ಶಾಲೆ, ವಿವಿಧ ಶಾಲೆಗಳು ಮತ್ತು ಕಾಲೇಜು ವಿಧ್ಯಾರ್ಥಿಗಳಿಂದ ಭರತ ನಾಟ್ಯ, ಜನಪದ ಗೀತೆ ಗಾಯನ, ಗುಂಪು ನೃತ್ಯ, ಜನಪದ ನೃತ್ಯ, ಚಿತ್ರಗೀತೆಗಳ ಪ್ರದರ್ಶನ ಹಾಗೂ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವಿಧ್ಯಾರ್ಥಿಗಳು ಮತ್ತು ವಿವಿಧ ತಂಡಗಳ ಸದಸ್ಯರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. 

ಕಲಾ ಉತ್ಸವ ಕೊಡಗು ಆ

ಯೋಜಕ ಸಂಸ್ಥೆಯ ಸದಸ್ಯರು, ವಿವಿಧ ಶಾಲೆಯ ವಿದ್ಯಾರ್ಥಿಗಳು ನೃತ್ಯ ತರಬೇತಿ ಶಾಲೆಯ ವಿದ್ಯಾರ್ಥಿಗಳು, ಪೊಷಕರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.