ಅಬುದಾಬಿಯಲ್ಲಿ ತುಲಬಾ ದರ್ಸ್ 30ನೇ ವಾರ್ಷಿಕ ಸಮ್ಮೇಳನದ ಪೋಸ್ಟರ್ ಬಿಡುಗಡೆ
ಅಬುದಾಬಿ: ಶೈಖುನಾ ಅಲ್ ಹಾಜ್ ಮೊಯ್ದು ಫೈಝಿ ಉಸ್ತಾದ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ತರ್ಬಿಯತ್ ತುಲಬಾ ದರ್ಸ್ ಇದರ 30ನೇ ವಾರ್ಷಿಕ ಮಹಾ ಸಮ್ಮೇಳನದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಅಬುದಾಬಿಯಲ್ಲಿ ನಡೆಯಿತು. ಹನೀಫ್ ಹರಿಯಮೂಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಿ. ಟಿ.ಡಿ.ಎಸ್ 30ನೇ ವಾರ್ಷಿಕ ಮಹಾ ಸಮ್ಮೇಳನ ಯಸಶ್ಸುಗೊಳಿಸಲು ಹಾಗೂ ಸಮ್ಮೇಳನಕ್ಕೆ ಬೇಕಾಗುವ ಸಹಕಾರ ನೀಡಿ ಸಹಕರಿಸಬೇಕೆಂದು ಟಿ.ಟಿ.ಡಿ.ಎಸ್ ಪೂರ್ವ ವಿದ್ಯಾರ್ಥಿ ಹಾಗೂ SKSSF ಅಲ್ ಐನ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಜುನೈದ್ ಕೊಡಗು ಕರೆ ನೀಡಿದರು. SKSSF ಅಬುದಾಬಿ ವರ್ಕಿಂಗ್ ಕಾರ್ಯದರ್ಶಿ ತ್ವಾಹ, ಉಮರಬ್ಬ ಪಾಂಡವರಕಲ್ಲು, ಶಬೀರ್ ಕನ್ನಡಿಕಟ್ಟೆ, ಅನಸ್ ಕರಾಯ, ಹಿದಾಯತ್ ಮಾರ್ವೆಲ್, ಹಂಸ , ಶರೀಫ್ ಮೂಸಾನ್ ಮತ್ತಿತ್ತರು ಹಾಜರಿದ್ದರು.