ಸೋಮವಾರಪೇಟೆ ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯ ನಿರ್ವಾಹಕಾಧಿಕಾರಿ ಮತ್ತು ಇಬ್ಬರು ಸದಸ್ಯರ ಕುಮ್ಮಕ್ಕಿನಿಂದ ರಾಜಕೀಯ ಪ್ರೇರಿತವಾಗಿ ಸದಸ್ಯತ್ವ ರದ್ದು: ಪ್ರಸಾದ್ ಕುಟ್ಟಪ್ಪ ಆರೋಪ

ಸೋಮವಾರಪೇಟೆ ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯ ನಿರ್ವಾಹಕಾಧಿಕಾರಿ ಮತ್ತು  ಇಬ್ಬರು ಸದಸ್ಯರ ಕುಮ್ಮಕ್ಕಿನಿಂದ ರಾಜಕೀಯ ಪ್ರೇರಿತವಾಗಿ ಸದಸ್ಯತ್ವ ರದ್ದು:  ಪ್ರಸಾದ್ ಕುಟ್ಟಪ್ಪ ಆರೋಪ

ಮಡಿಕೇರಿ:ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಸಮುದಾಯದವರಿಗೆ ಮೂಲಸೌಲಭ್ಯ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಹುಲುಗುಲಿ ಗ್ರಾಮದ ದೇವು ಎಂಬುವವರ ಮನೆಯ ಮುಂಭಾಗದಲ್ಲಿ ಸೋಲಾರ್ ದೀಪ ಅಳವಡಿಸಲಾಗಿತ್ತು. ಈ ಕಾಮಗಾರಿಯನ್ನು ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಆದರೆ, ಈ ಹಿಂದೆ ಇದ್ದ ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿಗಳು ಹಳೆ ವೈಷಮ್ಯದಿಂದ ಕಾಮಗಾರಿಯಲ್ಲಿ ದುರುಪಯೋಗವಾಗಿದೆ ಎಂದು ಆರೋಪಿಸಿ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ತನ್ನ ಏಳಿಗೆ ಸಹಿಸಲಾಗದೆ ಸದಸ್ಯತ್ವ ರದ್ಧತಿಗೆ ಶಿಫಾರಸು ಮಾಡಿದ್ದರು. ಸೋಮವಾರಪೇಟೆ ತಾಲೂಕು ಪಂಚಾಯಿತಿಯ ನಿವೃತ್ತ ಕಾರ್ಯ ನಿರ್ವಾಹಕಾಧಿಕಾರಿ ಮತ್ತು ಸುಂಟಿಕೊಪ್ಪ ಗ್ರೇಡ್೧ ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರ ಕುಮ್ಮಕ್ಕಿನಿಂದ ರಾಜಕೀಯ ಪ್ರೇರಿತವಾಗಿ ಸದಸ್ಯತ್ವ ರದ್ದುಗೊಳಿಸಲಾಗಿದ್ದು, ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಸುಂಟಿಕೊಪ್ಪ ಗ್ರೇಡ್೧ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಮತ್ತು ಹಾಲಿ ಸದಸ್ಯರಾದ ಪ್ರಸಾದ್ ಕುಟ್ಟಪ್ಪ ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

 ತನ್ನ ಏಳಿಗೆ ಸಹಿಸಲಾಗದೆ ಸದಸ್ಯತ್ವ ರದ್ಧತಿಗೆ ಶಿಫಾರಸು ಮಾಡಿದ್ದರು, ಸದ್ಯ ಸದಸ್ಯತ್ವ ರದ್ದುಗೊಳಿಸಿದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ, ಯಾವುದೇ ತಪ್ಪು ಮಾಡದಿದ್ದರು ಅಧಿಕಾರಿ ಮತ್ತು ಕೆಲವು ಸದಸ್ಯರಿಂದ ನೋವು ಅನುಭವಿಸುವಂತಾಗಿದೆ. ಸೋಲಾರ್ ದೀಪ ಅಳವಡಿಕೆ ಕಾಮಗಾರಿ ಕುರಿತು ಮರುತನಿಖೆ ನಡೆಸುವಂತೆ ಒತ್ತಾಯಿಸಲಾಗುವುದು. ಜತೆಗೆ ಕಾನೂನು ಹೋರಾಟ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸುಂಟಿಕೊಪ್ಪ ಗ್ರೇಡ್೧ ಗ್ರಾಮ ಪಂಚಾಯಿತಿಯ ಸದಸ್ಯ ಶಬ್ಬೀರ್ , ಸದಸ್ಯ ಆಲಿಕುಟ್ಟಿ, ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ತಾಲೂಕು ಸಂಚಾಲಕ ಹರೀಶ್ ಕುಮಾರ್ ಇದ್ದರು.