ಎಸ್.ಕೆ ಎಫ್ ಸಿ ಮರಗೋಡು ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್: ಅತಿಥೇಯ ಎಸ್ ಕೆ ಎಫ್ ಸಿ ಚಾಂಪಿಯನ್, ಸೋಕರ್ ಯುನೈಟೆಡ್ ಅಮ್ಮತಿ ರನ್ನರ್ಸ್

ಎಸ್.ಕೆ ಎಫ್ ಸಿ ಮರಗೋಡು ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್: ಅತಿಥೇಯ ಎಸ್ ಕೆ ಎಫ್ ಸಿ ಚಾಂಪಿಯನ್,  ಸೋಕರ್ ಯುನೈಟೆಡ್ ಅಮ್ಮತಿ  ರನ್ನರ್ಸ್

ಮಡಿಕೇರಿ- ಎಸ್ ಕೆ ಎಫ್ ಸಿ ಮರಗೋಡು ಇವರ ವತಿಯಿಂದ ನಡೆದ ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಅತಿಥೇಯ ಎಸ್ ಕೆ ಎಫ್ ಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ , ಸೋಕರ್ ಯುನೈಟೆಡ್ ಅಮ್ಮತಿ ರನ್ನರ್ಸ್ ಸ್ಥಾನ ಕ್ಕೆ ತೃಪ್ತಿ ಪಟ್ಟು ಕೊಂಡಿತು, ಹಾಗೆಯೆ 3 ಹಾಗೂ 4 ಸ್ಥಾನವನ್ನು ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ ತಂಡ ಹಾಗೂ ಎಂ, ಎಫ್, ಸಿ ಅಮ್ಮತಿ ತಂಡ ಪಡೆದುಕೊಂಡಿತು.

ನವೆಂಬರ್ 8 ಹಾಗೂ 9 ರಂದು ಮರಗೋಡುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಎಸ್ ಕೆ ಎಫ್ ಸಿ ಮರಗೋಡು ಇವರ ವತಿಯಿಂದ ನಡೆದ ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು ಏಳು ತಂಡಗಳು ಚಾಂಪಿಯನ್ ಟ್ರೋಫಿಗಾಗಿ ಸೆಣಸಾಡಿದವು. ಇದಕ್ಕೂ ಮೊದಲು ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಸ್ಟಾರ್ ಬಾಯ್ಸ್ ಅಭ್ಯತ್ ಮಂಗಲ ಹಾಗೂ ಸೋಕರ್ ಯುನೈಟೆಡ್ ಅಮ್ಮತಿ ತಂಡದ ನಡುವೆ ನಡೆದ ರೋಚಕ ಹಣಹಣಿ ಯಲ್ಲಿ 2 ತಂಡವು ಪೂರ್ಣ ಅವಧಿಯಲ್ಲಿ 1-1 ಗೋಲ್ ಗಳ ಸಮಬಲ ಸಾಧಿಸಿ ಪೆನಲ್ಟಿಯತ್ತ ಸಾಗಿತು, ಪೆನಲ್ಟಿ ಶೂಟೌಟ್ ನಲ್ಲಿ ಸೋಕರ್ ಯುನೈಟೆಡ್ ಅಮ್ಮತಿ ತಂಡವು 4-2 ಗೊಲುಗಳ ಅಂತರದಲ್ಲಿ ಗೆದ್ದು ಫೈನಲ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿತು.

ದ್ವಿತೀಯ ಸೆಮಿ ಫೈನಲ್ ಪಂದ್ಯವು ಅತಿಥೇಯ ಎಸ್ ಕೆ ಎಫ್ ಸಿ ಹಾಗೂ ಎಂ, ಎಫ್ ಸಿ ತಂಡದ ನಡುವೆ ನಡೆದ ರೋಚಕ ಹಣಹಣಿಯಲ್ಲಿ ಎಸ್ ಕೆ ಎಫ್ ಸಿ ,ತಂಡವು 4-0 ಗೊಲುಗಳ ಅಂತರದಲ್ಲಿ ಗೆದ್ದು ಫೈನಲ್ ಗೆ ದ್ವಿತೀಯ ಅರ್ಹತೆ ಪಡೆದುಕೊಂಡಿತು. ಫೈನಲ್ ಪಂದ್ಯವು ಅತಿಥೇಯ ಎಸ್ ಕೆ ಎಫ್ ಸಿ ಹಾಗೂ ಸೋಕರ್ ಯುನೈಟೆಡ್ ಅಮ್ಮತಿ, ತಂಡದ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಎಸ್ ಕೆ ಎಫ್ ಸಿ ಮರಗೋಡು ತಂಡವು ಸೋಕರ್ ಯುನೈಟೆಡ್ ಅಮ್ಮತಿ, ವಿರುದ್ಧ 2-1ಅಂತರದಲ್ಲಿ ಗೆದ್ದು ಎಸ್ ಕೆ ಎಫ್ ಸಿ ಮರಗೋಡು ಮೊದಲ ವರ್ಷದ ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ ಸೀಸನ್-1 ರ ಚಾಂಪಿಯನ್ ಪಟ್ಟ ಅಲಂಕರಿಸಿತು.

 ಕ್ರೀಡಾಕೂಟದಲ್ಲಿ ಹೈ ಸ್ಕೋರರ್ ಆಗಿ ಎಂ ಎಫ್ ಸಿ ತಂಡದ ಶೇಷಪ್ಪ ಪಡೆದು ಕೊಂಡರೆ ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಸೋಕರ್ ಯುನೈಟೆಡ್ ಅಮ್ಮತಿ, ತಂಡದ ಶಿವು ಪಡೆದು ಕೊಂಡರು,ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಯನ್ನು ಎಸ್ ಕೆಎಫ್ ಸಿ ತಂಡದ ರಮೇಶ್ ಪಡೆದು ಕೊಂಡರೆ , ಉದಯೋನ್ಮೋಕ ಪ್ರಶಸ್ತಿಯನ್ನು ಎಸ್ ಕೆಎಫ್ ಸಿ ತಂಡದ ಪ್ರವೀತ್ ಪಡೆದರೆ, ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಸೋಕರ್ ಯುನೈಟೆಡ್ ಅಮ್ಮತಿ, ತಂಡದ ನಾಯಕ ರಕ್ಷಿತ್ (ರಕ್ಷಿ )ಪಡೆದು ಕೊಂಡರು.

ವರದಿ:ಅಶೋಕ್ ಮಡಿಕೇರಿ