ಕೊಳಕೇರಿಯಲ್ಲಿ ಎಸ್ಎಸ್ಎಫ್ ಧ್ವಜ ದಿನಾಚರಣೆ

ಕೊಳಕೇರಿಯಲ್ಲಿ ಎಸ್ಎಸ್ಎಫ್  ಧ್ವಜ ದಿನಾಚರಣೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲು ವ್ಯಾಪ್ತಿಯ ಕೊಳಕೇರಿಯಲ್ಲಿ ಎಸ್ ಎಸ್ ಎಫ್ ಶಾಖೆ ವತಿಯಿಂದ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು. ಕೊಳಕೆರಿಯಲ್ಲಿರುವ ಎಸ್ ಎಸ್ ಎಫ್ ಕಚೇರಿಯ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮೊಹಿಯುದ್ದೀನ್ ಕುಟ್ಟಿ ಹಾಜಿ ಯವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಎಸ್ ವೈ ಎಸ್ ಮಾಜಿ ರಾಜ್ಯಾಕ್ಷರಾದ ಹಫೀಲ್ ಸಅದಿಯವರು ಧ್ವಜದಿನದ ಮಹತ್ವದ ಕುರಿತು ಸಂದೇಶ ಭಾಷಣ ನಡೆಸಿದರು. ಈ ಸಂದರ್ಭ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಸಮಿತಿ ಸದಸ್ಯರಾದ,ಮೂಸಹಾಜಿ,ಹಾರಿಸ್ ಸಾಹಿಬ್,ಸಿ. ಎಂ.ಖಾಲಿದ್, ಸಿ. ಎಚ್.ಇಸ್ಮಾಯಿಲ್, ಕೊಳಕೇರಿ ಎಸ್ ಎಸ್ ಎಫ್ ಯೂನಿಟ್ ಅಧ್ಯಕ್ಷ ಸುಹೈಲ್ ಫಾಲ್ ಲಿ, ಎಸ್ ವೈ ಎಸ್, ಎಸ್ ಎಸ್ ಎಫ್,ಎಸ್ ಜೆ ಎಂ ಕಾರ್ಯ ಕರ್ತರು ಹಾಜರಿದ್ದರು.