ಶನಿವಾರಸಂತೆ: ಚಂದ್ರಮೌಳೆಶ್ವರ ಗಣಪತಿ ದೇವಾಲಯದಲ್ಲಿ ಲಕ್ಷದೀಪೋತ್ಸವ
ಶನಿವಾರಸಂತೆ:ಇಲ್ಲಿನ ಚಂದ್ರಮೌಳೆಶ್ವರಗಣಪತಿ ದೇವಾಲಯದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಬುಧವಾರ ಸಂಜೆ ವಿಶೇಷ ಪೂಜೆ ನಡೆಯಿತು.ಈ ಪ್ರಯುಕ್ತ ಮಹಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.ದೇವಾಲಯದ ಸುತ್ತ ದೀಪಾಲಂಕಾರದೊಂದಿಗೆ ಸಿಂಗರಿಸಿದ್ದರು,ಸಾವೀರಾರು ಸಂಖ್ಯೆಯಲ್ಲಿ ಸುತ್ತ ಮುತ್ತಲಿನ ಭಕ್ತಾಧಿಗಳು ಪಾಲ್ಗೊಂಡು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಪೂಜಾ ವಿಧಿವಿದಾನಗಳನ್ನು ದೇವಾಲಯದ ಅರ್ಚಕ ಮಹಂತೇಶ್ ಭಟ್ ನೆರವೇರಿಸಿದರು.
