ಸೆಪ್ಟೆಂಬರ್ 24 ಕಾಫಿ ದಸರಾ ಸಂಭ್ರಮ| ಕಾಫಿ ಕೖಷಿ ಮಾಹಿತಿ, ಸಾಧಕರಿಗೆ ಸನ್ಮಾನ, ಖಾದ್ಯಗಳ ಸ್ಪರ್ಧೆ ಕಾಫಿ ಘಮಲಿನ ಮಳಿಗೆಗಳ ಆಕಷ೯ಣೆ

ಸೆಪ್ಟೆಂಬರ್ 24  ಕಾಫಿ ದಸರಾ ಸಂಭ್ರಮ| ಕಾಫಿ ಕೖಷಿ ಮಾಹಿತಿ,  ಸಾಧಕರಿಗೆ ಸನ್ಮಾನ,  ಖಾದ್ಯಗಳ  ಸ್ಪರ್ಧೆ ಕಾಫಿ ಘಮಲಿನ ಮಳಿಗೆಗಳ ಆಕಷ೯ಣೆ

ಮಡಿಕೇರಿ. ಸೆ. 18 - ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೆ.24 ರಂದು ಬುಧವಾರ ಕಾಫಿ ದಸರಾ ಸಂಭ್ರಮ ಮೇಳೈಸಲಿದ್ದು, ಕಾಫಿ ಕೖಷಿಕರಿಗೆ ಸನ್ಮಾನ ಮತ್ತು ಕಾಫಿ ಕೖಷಿ ಸಂಬಂಧಿತ ಮಾಹಿತಿ ದೊರಕಲಿದೆ ಎಂದು ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ ನೀಡಿದ್ದಾರೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಪರಿಕಲ್ಪನೆಯಲ್ಲಿ ಕಳೆದ ವಷ೯ದಿಂದ ಮಡಿಕೇರಿ ದಸರಾಕ್ಕೆ ಪರಿಚಯಿಸಲ್ಪಟ್ಟ ಕಾಫಿ ದಸರಾಕ್ಕೆ ಉತ್ತಮ ಸ್ಪಂದನ ದೊರಕಿದ್ದ ಹಿನ್ನಲೆಯಲ್ಲಿ ಈ ವಷ೯ವೂ ಕಾಫಿ ದಸರಾ ಆಯೋಜಿಸಲಾಗಿದೆ. ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿತ ಎರಡನೇ ವಷ೯ದ ಕಾಫಿ ದಸರಾವನ್ನು ಸೆ.24 ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ಕನಾ೯ಟಕದ ಮೊದಲ ಮಹಿಳಾ ಕಾಫಿ ಉದ್ಯಮಿ ಕೊಡಗಿನ ದಿ.ಸಾಕಮ್ಮ ಸ್ಮರಣಾಥ೯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್. ಭೋಸರಾಜ್ ಅವರು ಕಾಫಿ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.

ವೇದಿಕೆಯ ಕಾಯ೯ಕ್ರಮಗಳನ್ನು ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ದೇವವೖಂದ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ವಹಿಸಲಿದ್ದಾರೆ.

 ಮುಖ್ಮಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್ ಪೊನ್ನಣ್ಣ, ಸಂಸದ ಯದುವೀರ್ ಒಡೆಯರ್, ರಾಜ್ಯಸಭಾ ಸದಸ್ಯ ಅಜಯ್ ಮಕನ್, ವಿಧಾನಪರಿಷತ್ ಸದಸ್ಯರಾದ ಎಂ.ಪಿ. ಸುಜಾಕುಶಾಲಪ್ಪ, ಬೋಜೇಗೌಡ, ಡಾ.ಧನಂಜಯ್ ಸಜಿ೯, ಜಿಲ್ಲಾಧಿಕಾರಿ ವೆಂಕಟರಾಜಾ,ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾಯಾ೯ಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾಯ೯ದಶಿ೯ ಅರುಣ್ ಶೆಟ್ಟಿ, ಮಡಿಕೇರಿ ನಗರಾಭಿವೖದ್ದಿ ಪ್ರಾಧಿಕಾರದ ಅದ್ಯಕ್ಷ ಬಿ.ವೈ.ರಾಜೇಶ್ , ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ, ಮಹಿಳಾ ಕಾಫಿ ಜಾಗೖತಿ ಸಂಘದ ಅಧ್ಯಕ್ಷೆ ಜ್ಯುತಿಕಾ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.

ಕಾಫಿ ಸಂಬಂಧಿತ ಮಾಹಿತಿ

ಕಾಫಿ ಕೃಷಿಕರಿಗೆ ಕಾಫಿ ದಸರಾ ಅಂಗವಾಗಿ  ಕೖಷಿಕರಿಗ ಸಾಕಷ್ಟು ಮಾಹಿತಿ ನೀಡುವ ಉಪನ್ಯಾಸ ಕಾಯ೯ಕ್ರಮವನ್ನು ಅಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಏಪ೯ಡಿಸಲಾಗಿದೆ. ಭಾರತೀಯ ಕಾಫಿ ಮಂಡಳಿಯ ಗುಣಮಟ್ಟ ವಿಭಾಗದ ನಿದೇ೯ಶಕ ಡಾ.ಐಚೆಟ್ಟೀರ ಮಂದಪ್ಪ ಕಾಫಿಯಲ್ಲಿ ಗುಣಮಟ್ಟ  ಕಾಯ್ದುಕೊಳ್ಳುವಿಕೆ ವಿಚಾರ ಸಂಬಂಧಿತ ಮಾತನಾಡಲಿದ್ದು, ಸಕಲೇಶಪುರದ ಪ್ರಗತಿಪರ ಕೖಷಿಕ ಕರಣ್ ಅವರು ಕಾಫಿ ಕೖಷಿಯಲ್ಲಿ ಇತ್ತೀಚಿನ ಹೊಸ ತಳಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

 ಕುಶಾಲನಗರದ ಪ್ರಗತಿ ಪರ ಕೖಷಿಕ ಜೆಮಿ೯ ಡಿಸೋಜಾ ಅವರು ರೋಬಸ್ಟಾ ಕಾಫಿಯಲ್ಲಿ ಕುಬ್ಜ ತಳಿಯ ಬಗ್ಗೆ ಮಾಹಿತಿ ನೀಡಿದರೆ, ಪಶುವೈದ್ಯ ಇಲಾಖೆಯ ಸಹಾಯಕ ನಿದೇ೯ಶಕ ಡಾ. ಚೇಂದ್ರಿಮಾಡ ಕ್ಯಾಪ್ಟನ್ ತಿಮ್ಮಯ್ಯ ಅವರು ಕಾಫಿ ಕೖಷಿಗೆ ಪೂರಕವಾದ ಮಣ್ಣಿನ ಫಲವತ್ತತೆ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಕಾಫಿ ಸಾಧಕರಿಗೆ ಸನ್ಮಾನ -

ಕಾಫಿ ದಸರಾ ಅಂಗವಾಗಿ ಜಿಲ್ಲೆಯ 10 ಸಾಧಕ ಕೖಷಿಕರಿಗೆ ಮಧ್ಯಾಹ್ನ 1 ಗಂಟೆಗೆ ಸನ್ಮಾನದ ಗೌರವ ನೆರವೇರಲಿದೆ. ಸುಂಟಿಕೊಪ್ಪ ಬಳಿಯ ಬೆಟ್ಟಗೇರಿ ಎಸ್ಟೇಟ್ ಮಾಲೀಕ ವಿನೋದ್ ಶಿವಪ್ಪ, ಕಿರಗಂದೂರು ಗ್ರಾಮದ ಹಿರಿಯ ಕೖಷಿಕರಾದ ಎಸ್.ಎಂ.ಚಂಗಪ್ಪ, ಪ್ರಗತಿಪರ ಬೆಳೆಗಾರ ಲವ ಎಡದಂಟೆ, ಪೊನ್ನಂಪೇಟೆ ಹುದೂರು ಗ್ರಾಮದ ಸಾಧಕ ಕೖಷಿಕ ಬಿ.ಪಿ. ರವಿಶಂಕರ್, , ಕೊಡ್ಲಿಪೇಟೆಯ ಕಾಫಿ ನಸ೯ರಿ ಮಾಲೀಕ ಡಿ.ವೈ.ರಜಾಕ್, ಹಿರಿಯ ಕಾಫಿ ಉದ್ಯಮಿ ಮಡಿಕೇರಿಯ ನಿಜಾಮುದ್ದೀನ್ ಸಿದ್ದಿಕಿ, ತಾಕೇರಿಯ ಸಿರಿ ಸ್ವಸಹಾಯ ಮಹಿಳಾ ಸಂಘ, ಕುಂದಗ್ರಾಮದ ಪ್ರಗತಿ ಪರ ಕೖಷಿಕ ಕೊಡಂದೇರ ನರೇನ್ ಕುಟ್ಟಯ್ಯ,, ಚೆಟ್ಟಳ್ಳಿ ಪೊನ್ನತ್ತಮೊಟ್ಟೆಯ ಮಿಶ್ರಬೆಳೆ ಕೖಷಿಕ ರಾಬಟ್೯ , ಶ್ರೀ ವಿಕ್ರಂ, ಪ್ರಗತಿ ಪರ ಕೖಷಿಕರು, ಮಸಗೋಡು. … ಅವರನ್ನು ಸನ್ಮಾನಿಸಲಾಗುತ್ತದೆ.

 ಕಾಫಿ ಖಾದ್ಯ ಸ್ಪಧೆ೯ಗಳು -

ಕಾಫಿ ದಸರಾ ಅಂಗವಾಗಿ ಕಾಫಿಯಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳ ಸ್ಪಧೆ೯ ಆಯೋಜಿಸಲಾಗಿದೆ. ಕಾಫಿ ಫ್ಲೆವರ್ ಕೇಕ್, ವಿಭಾಗ,ಕಾಫಿ ಫ್ಲೆವರ್ ಕಪ್ ಕೇಕ್ ವಿಭಾಗ, ಕಾಫಿ ಫ್ಲೆವರ್ ಬ್ರೌನಿ ವಿಭಾಗ,ಕಾಫಿ ಫ್ಲೆವರ್ ಬಿಸ್ಕತ್ ವಿಭಾಗ,ಕಾಫಿ ಫ್ಲೆವರ್ ಪುಡ್ಡಿಂಗ್ ವಿಭಾಗ, ವಿಭಿನ್ನ ರುಚಿಯಿರುವ ಕಾಫಿ ಪಾನೀಯವಿಭಾಗ, ಕಾಫಿ ಫ್ಲೇವರ್ ಚಾಕಲೇಟ್ ವಿಭಾಗಗಳಲ್ಲಿ ಸ್ಪಧೆ೯ ಆಯೋಜಿತವಾಗಿದೆ.

 ಮಳಿಗೆಗಳು - ಕಾಫಿ ದಸರಾ ಅಂಗವಾಗಿ ಈ ವಷ೯ವೂ 35 ಮಳಿಗೆಗಳು ಕಾಫಿ ಸಂಬಂಧಿತ ಮಾಹಿತಿಯನ್ನು ನೀಡಲಿವೆ. ಕೊಡಗಿನ ಅನೇಕ ಕಾಫಿ ಕೆಫೆಗಳಲ್ಲಿ ಸ್ವಾದಿಷ್ಟ ಕಾಫಿ ಸವಿಯನ್ನೂ ಸವಿಯಬಹುದಾಗಿದೆ. ಬಾರತೀಯ ಕಾಫಿ ಮಂಡಳಿ, ಕೖಷಿ ಇಲಾಖೆ, ಪಶುವೈದ್ಯಕೀಯ ಇಲಾಖೆ, ತೋಟಗಾರಿಕಾ ಇಲಾಖೆ, ಕೈಗಾರಿಕಾ ಇಲಾಖೆ, ಹಾಪ್ ಕಾಮ್ಸ್, ನಂದಿನಿ ಹಾಲಿನ ಉತ್ಪನ್ನಗಳು, ಮೀನುಗಾರಿಕಾ ಇಲಾಖೆ,, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಸೇರಿದಂತೆ ಕಾಫಿ ಸಂಬಂಧಿತ ಅನೇಕ ಸಂಘಸಂಸ್ಥೆಗಳು, ಕಾಪಿ ಕೆಫೆಗಳು ಈ ವಷ೯ದ ಕಾಫಿ ದಸರಾದಲ್ಲಿ ಮಾಹಿತಿ ನೀಡಲಿವೆ ಎಂದು ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ ನೀಡಿದ್ದಾರೆ.

ಕಾಫಿ ದಸರಾ ಸಮಿತಿ -

ಶಾಸಕ ಡಾ.ಮಂತರ್ ಗೌಡ ಮಾಗ೯ದಶ೯ನದಲ್ಲಿನ ಕಾಫಿ ದಸರಾ ಸಮಿತಿಯಲ್ಲಿ ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ, ನಿದೇ೯ಶಕ ಕೆ.ಕೆ. ವಿಶ್ವನಾಥ್, ಮೂಡಾ ಅಧ್ಯಕ್ಷ ಬಿ.ವೈ.ರಾಜೇಶ್, ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಸಲಹೆಗಾರರಾಗಿದ್ದಾರೆ. ಕಾಫಿ ದಸರಾ ಸಮಿತಿ ಸದಸ್ಯರಾಗಿ ವಿನೋದ್ ಮೂಡಗದ್ದೆ, ಮೇಪಾಡಂಡ ಸವಿತಾ ಕೀತ೯ನ್, ಪುದಿನೆರವನ ರೇವತಿ , ವೀಣಾಕ್ಷಿ, ಪಾಲೆಯಂಡ ರೂಪಾ ಸುಬ್ಬಯ್ಯ, ಮಿನಾಜ್ ಪ್ರವೀಣ್, ಮೂವೇರ ಸರಿತ ಹರೀಶ್, ಶಿವಪ್ಪ, ಸುನೀಲ್ ಕಾಯ೯ನಿವ೯ಹಿಸಲಿದ್ದಾರೆ ಎಂದೂ ಅನಿಲ್ ತಿಳಿಸಿದ್ದಾರೆ. ಕಾಫಿ ದಸರಾ . ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸೆ.24 ರಂದು 1 ದಿನಕ್ಕೆ ಮಾತ್ರ ಸೀಮಿತವಾಗಿರಲಿದೆ.