ಸೋಮವಾರಪೇಟೆ: ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಇಂದಿರಾಗಾಂಧಿ ಹುಟ್ಟು ಹಬ್ಬ ಆಚರಣೆ
ಸೋಮವಾರಪೇಟೆ: ಇಂದಿರಾಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಮಾಜಿ ಪ್ರಧಾನ ಇಂದಿರಾಗಾಂಧಿ ಅವರ 108ನೇ ಹುಟ್ಟುಹಬ್ಬವನ್ನು ಪುಟ್ಟಪ್ಪ ವೃತ್ತದಲ್ಲಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್ ಅವರು ಇಂದಿರಾಗಾಮಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಇಂದಿರಾ ಕ್ಯಾಂಟಿನ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರ ಪವನ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಸಂಘದ ಪದಾಧಿಕಾರಿಗಳಾದ ರವೀಂದ್ರ, ಅಜಯ್, ರವಿ, ಪಳನಿಸ್ವಾಮಿ, ವೇಲುಸ್ವಾಮಿ, ಧರ್ಮ, ನಾಗರಾಜು, ಶೇಷಪ್ಪ, ಕುಮಾರ, ನವೀನ್ ಇದ್ದರು.
