ಸೋಮವಾರಪೇಟೆ: ಯಡೂರು-ಕಲ್ಲಕಂಡಿ ರಸ್ತೆ ವೀಕ್ಷಿಸಿದ ಶಾಸಕ ಡಾ.ಮಂತರ್ ಗೌಡ: ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಶಾಸಕರು

ಸೋಮವಾರಪೇಟೆ: ಯಡೂರು-ಕಲ್ಲಕಂಡಿ ರಸ್ತೆ ವೀಕ್ಷಿಸಿದ ಶಾಸಕ ಡಾ.ಮಂತರ್ ಗೌಡ: ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಶಾಸಕರು

ಸೋಮವಾರಪೇಟೆ: ಶಾಸಕ ಡಾ.ಮಂತರ್ ಗೌಡ ಅವರು ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡೂರು- ಕಲ್ಲುಕಂಡಿ ರಸ್ತೆ ವೀಕ್ಷಿಸಿ, ರೈತರು ಹಾಗೂ ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಶಾಸಕ ಡಾ.ಮಂತರ್ ಗೌಡ ಸ್ಪಂದಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕು ಹಾನಗಲ್ ಪಂಚಾಯಿತಿ ವ್ಯಾಪ್ತಿಯ ಯಡೂರು ಗ್ರಾಮದ ಕಲ್ಲುಕಂಡಿ - ದೊಡ್ಡದಿಣ್ಣೆ ಪ್ರದೇಶದ ನಡುವೆ ಸಂಪರ್ಕ ರಸ್ತೆ ಇಲ್ಲದೆ ಅನಾನುಕೂಲವಾಗುತ್ತಿರುವುದನ್ನು ಗಮನಿಸಿದ ಶಾಸಕ ಡಾ.ಮಂತರ್ ಗೌಡ ರವರು ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.

 ರೈತರು ಹಾಗೂ ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಶಾಸಕರು ಕಲ್ಲುಕಂಡಿ - ಯಡೂರು ಗ್ರಾಮದ ದೊಡ್ಡದಿಣೆ ನಡುವೆ ಸಂಪರ್ಕ ರಸ್ತೆಯನ್ನು ನಿರ್ಮಿಸಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ ಎಂ ಲೋಕೇಶ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ ಬಿ ಸತೀಶ್, ಹಾನಗಲ್ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸಿ ಎಂ ಪ್ರದೀಪ್,ಬೂತ್ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಪ್ಪ, ಗ್ರಾಮ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಮತ್ತು ಸಮಿತಿ ಸದಸ್ಯರು, ಕಾಂಗ್ರೆಸ್ ಪ್ರಮುಖರಾದ ಡಿ ಸಿ ರಾಜು, ನಾಗೇಶ್, ಜಗದೀಶ್, ವಿನು, ವೈ ಎಮ್ ನಾಗರಾಜು, ಯುವ ಮುಖಂಡ ಕಾರ್ತಿಕ್, ವಿವಿಧ ಮಹಿಳಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.