ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ: ಪ್ರಸಕ್ತ ಸಾಲಿನಲ್ಲಿ ಸಂಘ 1.23ಕೋಟಿ ರೂ, ಗಳ ಲಾಭ

ಸೋಮವಾರಪೇಟೆ: 2759ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಅಧ್ಯಕ್ಷ ಜಿ.ಬಿ.ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಚನ್ನಬಸಪ್ಪ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಅಧ್ಯಕ್ಷರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘ 1.23ಕೋಟಿ ರೂ,.ಗಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.20 ಲಾಭಾಂಶ ನೀಡಲಾಗುವುದು ಎಂದು ಹೇಳಿದರು. ಸಂಘದ ದುಡಿಯುವ ಬಂಡವಾಳ 89.62 ಕೋಟಿ ರೂ.ಗಳಾಗಿರುತ್ತದೆ. 5438 ಸದಸ್ಯರಿದ್ದು, ಸದಸ್ಯರು ಮತ್ತು ಗ್ರಾಹಕರಿಗೆ 99.87ಕೋಟಿ ರೂ.ಗಳ ಸಾಲ ವಿತರಿಸಲಾಗಿದೆ. ಸಾಲ ಮರುಪಾವತಿ ಶೇ.98.57ರಷ್ಟಿದೆ ಎಂದು ಹೇಳಿದರು.
2024-25ನೇ ಸಾಲಿನಲ್ಲಿ ಏಳನೆ, ಹತ್ತನೆ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ಹಾಗು ಸಂಘದ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಎಚ್.ಕೆ. ಚಂದ್ರಶೇಖರ್, ನಿದೇಶಕರುಗಳಾದ ರೂಪ ಸತೀಶ್, ಬಿ.ಎಂ.ಸುರೇಶ್, ಪಿ.ಕೆ.ರವಿ, ಬಿ.ಜೆ.ದೀಪಕ್, ಶುಭಾಶ್ ತಿಮ್ಮಯ್ಯ, ಬಿ.ಶಿವಪ್ಪ, ಬಿ.ಕೆ.ಉದಯಕುಮಾರ್, ಕೆ.ಕೆ.ಚಂದ್ರಿಕಾ, ಎಂ.ಈ.ದೇವರಾಜ್, ಕೆ.ಆರ್.ಕಿರಣ್, ಸಿಇಒ ರವೀಂದ್ರ ಇದ್ದರು.