ಕ್ರಿಶ್ಚಿಯನ್ ಸಮುದಾಯ ಶೈಕ್ಷಣಿಕ, ಸಾಮಾಜಿಕವಾಗಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಾ ಬಂದಿದೆ: ಶಾಸಕ ಎಎಸ್ ಪೊನ್ನಣ್ಣ
ಗೋಣಿಕೊಪ್ಪ:ದಕ್ಷಿಣ ಕೊಡಗಿನ ಕ್ರಿಶ್ಚಿಯನ್ ಅಸೋಸ್ಸಿಯೇಷನ್ ರವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು,ವಿಶೇಷ ಆಹ್ವಾನದ ಮೇರೆಗೆ ಅತಿಥಿಯಾಗಿ ಭಾಗವಹಿಸಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಶಾಸಕರು ನೀಡಿದ ಅದ್ವಿತೀಯ ಕೊಡುಗೆಯನ್ನು ಸ್ಮರಿಸಿ, ಅವರಿಗೆ ಗೌರವಿಸಲು ಮತ್ತು ಆ ಪ್ರಯುಕ್ತ ಅವರನ್ನು ಸನ್ಮಾನಿಸಲು ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಗೋಣಿಕೊಪ್ಪದಲ್ಲಿರುವ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ಆಯೋಜನೆಗೊಂಡ ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಸ್ವೀಕರಿಸಿ ಮಾತನಾಡಿದ ಶಾಸಕರು, ಬಹು ಹಿಂದಿನ ಕಾಲದಿಂದಲೂ ಕ್ರಿಶ್ಚಿಯನ್ ಸಮುದಾಯದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.
ಸದಾ ಶಾಂತಿ, ಸೌಹಾರ್ದತೆಯನ್ನು ಬಯಸುವ ಸಮುದಾಯವು ಮತ್ತಷ್ಟು ಏಳಿಗೆಯನ್ನು ಕಾಣುವಂತಾಗಬೇಕೆಂದು ಆಶಿಸಿದರು. ತನ್ನ ಅಧಿಕಾರ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಹಾಗೂ ತನ್ನ ವೈಯುಕ್ತಿಕ ನಿಧಿಯಿಂದ ಮಾತ್ರವಲ್ಲದೆ ಸರಕಾರದ ವಿಶೇಷ ಅನುದಾನಗಳ ಮೂಲಕ ಅಲ್ಪಸಂಖ್ಯಾತರಾದ ಕ್ರಿಶ್ಚಿಯನ್ ಸಮುದಾಯದ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಕೋಟ್ಯಾಂತರ ರೂಪಾಯಿಯನ್ನು ನೀಡಿದ್ದೇನೆ ಮಾತ್ರವಲ್ಲದೆ ಇನ್ನು ಮುಂದೆಯೂ ಸಹ ಸಮುದಾಯದ ಉನ್ನತಿಗಾಗಿ ಯಾವುದೇ ರೀತಿಯ ಸಹಾಯ ಬಯಸಿದರೆ ಖಂಡಿತ ತನ್ನನ್ನು ಸಂಪರ್ಕಿಸಬೇಕಾಗಿ ಶಾಸಕರು ಇದೇ ಸಂದರ್ಭದಲ್ಲಿ ಹೇಳಿದರು. ಮಾನ್ಯ ಶಾಸಕರೊಂದಿಗೆ ಇನ್ನಿತರ ಗಣ್ಯರಿಗೂ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ದಕ್ಷಿಣ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಎ ಜೆ ಬಾಬು, ಧರ್ಮ ಗುರುಗಳು, ಕನ್ಯಾ ಶ್ರೀ ರವರು, ಹಾಗೂ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು ಹಾಗೂ ಸಮುದಾಯ ಬಾಂಧವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
