ವಿಜೃಂಭಣೆಯಿಂದ ಜರುಗಿದ ಆರಾಯಿರ ನಾಡ್ ಪೂಮಾಲೆ ಮಂದ್ ವಾರ್ಷಿಕ ಪುತ್ತರಿ ಕೋಲಾಟ್

ವಿಜೃಂಭಣೆಯಿಂದ ಜರುಗಿದ ಆರಾಯಿರ ನಾಡ್ ಪೂಮಾಲೆ ಮಂದ್ ವಾರ್ಷಿಕ ಪುತ್ತರಿ ಕೋಲಾಟ್

ವಿರಾಜಪೇಟೆ: ಪುತ್ತರಿ ಹಬ್ಬದ ಪ್ರಯುಕ್ತ ಇತಿಹಾಸ ಪೂರ್ವದಿಂದ ನಡೆದುಕೊಂಡು ಬರುತ್ತಿರುವ ಆರಾಯಿರ ನಾಡ್ ಪೂಮಾಲೆ ಮಂದ್ ವಾರ್ಷಿಕ ಪುತ್ತರಿ ಕೋಲಾಟ್ ಸಾಂಪ್ರದಾಯಕವಾಗಿ ನಡೆಯಿತು.

ಆರಾಯಿರ ನಾಡ್ ಪೂಮಾಲೆ ಮಂದ್ ವಿರಾಜಪೇಟೆ ವತಿಯಿಂದ ಪೂಮಾಲೆ ಮಂದ್ ನಲ್ಲಿ ವಾರ್ಷಿಕ ಪುತ್ತರಿ ಕೋಲಾಟ್ ಪ್ರದರ್ಶನ ವಿಜ್ರಂಭಣೆಯಿಂದ ಜರುಗಿತು. ಭೈರವನಾಡ್ ಎಡೆನಾಡ್, ಬೇಟೋಳಿನಾಡ್, ಪೊರೆವನಾಡ್ ಮತ್ತು ಕುಕ್ಲೂರು ಗ್ರಾಮ ನಾಡುಗಳು ಮತ್ತು, ಐಮಂಗಲ, ಚೆಂಬೆಬೆಳ್ಳೂರು, ಮಗ್ಗುಲ, ತಲಕಟ್ಟಕೇರಿ, ದೇವಣಗೇರಿ, ಹಾಲುಗುಂದ, ಭೈರನಾಡ್, ಬೇಟೋಳಿ, ಆರ್ಜಿ, ನಾಂಗಾಲ, ಕುಕ್ಲೂರು, ಕಣ್ಣಂಗಾಲ, ವೈಪಡ( ಮಗ್ಗುಲ) ಬಿಟ್ಟಂಗಾಲ. ಹಚ್ಚಿನಾಡ್ (ಪಚ್ಚಾಟ್) ಪೆಗ್ಗಳ, ಮತ್ತು ಬಾಳೂಗೋಡು ಗ್ರಾಮಗಳ ಬಾಂದವರು ಕೊಡವ ಸಾಂಪ್ರದಾಯಕ ಧಿರಿಸಿನಲ್ಲಿ ಪೂಮಾಲೆ ಮಂದ್ ಗೆ ಪ್ರವೇಶ ಮಾಡಿದರು. 

ನಂತರ ಊರು, ತಕ್ಕ, ನಾಡ್ ತಕ್ಕರಿಗೆ ಮಂದ್ ಸಮಿತಿಯ ಪಧಾದಿಕಾರಿಗಳು ಹೂಮಾಲೆ ಹಾಕಿ ಬರಮಾಡಿಕೊಂಡರು. ಎಲ್ಲಾ ಊರುಗಳ ಬಾಂಧವರಿಂದ ಮೂರು ಸುತ್ತುಗಳ ಕೋಲಾಟ್ ಪ್ರದರ್ಶನ ನಡೆಯಿತು. ಏಳು ಜೋಡಿಗಳಿಂದ ಪರೆಯ ಕಳಿ ನಡೆಯಿತು. ತ್ರೀವೆಣಿ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಉಮ್ಮತಾಟ್, ಬೊಳಕಾಟ್ ಪ್ರದರ್ಶನ ನಡೆಯಿತು.

 ಈ ಸಂದರ್ಭದಲ್ಲಿ ಮಾತನಾಡಿದ ಆರಾಯಿರ ನಾಡ್ ಪೂಮಾಲೆ ಮಂದ್ ಸಮಿತಿಯ ಮರಣ ನಿಧಿ ಫಂಡ್ ಅಧ್ಯಕ್ಷರಾದ ಚೇಂದಂಡ ಪೊನ್ನಪ್ಪ ಅವರು ವರ್ಷದಲ್ಲಿ ಒಂದು ಬಾರಿ ನಡೆಯುವ ಕೊಡವ ಸಂಪ್ರದಾಯಕ ವಾರ್ಷಿಕ ಕೋಲ್ ಧೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಕೊಡವ ಆಚಾರ ವಿಚಾರಗಳು ಜೀವಂತವಾಗಿರಿಸುವ ನಿಟ್ಟಿನಲ್ಲಿ ಕೊಡವ ಸಮೂದಾಯ ಬಾಂದವರು ಮತ್ತು ಕೊಡವ ಭಾಷೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲೆಗಳನ್ನು ಉಳಿಸುವ ಮತ್ತು ಪ್ರೋತ್ಸಾಹಿಸಿದಲ್ಲಿ ಮಾತ್ರ ಮುಂದಿನ ಪೀಳಿಗೆಯು ಆಚರಣೆಗೆ ಮುಂದಾಗುತ್ತದೆ ಎಂದು ಹೇಳಿದರು. 

ಕೋಲಾಟ್, ಪೆರಿಯ ಕಳಿ ಯಲ್ಲಿ ಭಾಗವಹಿಸಿದ ವಿಜೇತರಿಗೆ ಕಾಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆರಾಯಿರ ನಾಡ್ ಪೂಮಾಲೆ ಮಂದ್ ಸಮಿತಿಯ ಅಧ್ಯಕ್ಷರಾದ ಅಜ್ಜನಿಕಂಡ ಸುದೀರ್, ಉಪಾಧ್ಯಕ್ಷರಾದ ವಾಟೇರಿರ ಶಂಕರಿ ಪೂವಯ್ಯ, ಕಾರ್ಯದರ್ಶಿಗಳಾದ ಪೊಟ್ಟಂಡ ಗಣೇಶ್ ಮತ್ತು ಕ್ರೀಡಾ ಸಮಿತಿ ಅದ್ಯಕ್ಷರಾದ ಪುಗ್ಗೇರ ನಂದಾ ಹಾಗೂ ಊರು ತಕ್ಕ ನಾಡ್ ತಕ್ಕ ವಿವಿಧ ಊರುಗಳಿಂದ ಆಗಮಿಸಿದ ಕೊಡವ ಸಮುದಾಯ, ಭಾಷೀಕರು, ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ