ನಾಡಿನ ಅಭಿವೃದ್ಧಿಗೆ ಐರಿ ಸಮಾಜದವರ ಕೊಡುಗೆ ಅಪಾರ:ಶಾಸಕ ಎಎಸ್ ಪೊನ್ನಣ್ಣ

ನಾಡಿನ ಅಭಿವೃದ್ಧಿಗೆ ಐರಿ ಸಮಾಜದವರ ಕೊಡುಗೆ ಅಪಾರ:ಶಾಸಕ ಎಎಸ್ ಪೊನ್ನಣ್ಣ

ವಿರಾಜಪೇಟೆ: ವಿಧಾನಸಭಾ ಕ್ಷೇತ್ರದ ಐರಿ ಸಮಾಜ ಅರೆಮೇರಿ ಆಯೋಜಿಸಿದ ವಾರ್ಷಿಕ ಮಹಾಸಭೆ ಹಾಗೂ ಒತ್ತೊರ್ಮೆ ಕೂಟ ಬೊಡಿ ನಮ್ಮೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಪ್ರಮುಖವಾಗಿ ಐರಿ ಸಮಾಜದವರು ತಮ್ಮ ಸಮುದಾಯದ ವಿವಿಧ ಬೇಡಿಕೆಗಳನ್ನು ಶಾಸಕರಿಗೆ ಸಲ್ಲಿಸಿದರು. ಅದರಲ್ಲೂ ವಿಶೇಷವಾಗಿ ತಮ್ಮ ಸಮುದಾಯಕ್ಕೆ ವಿವಿಧ ಸೌಲತ್ತುಗಳನ್ನು ಕಲ್ಪಿಸಿ ಕೊಡಬೇಕೆಂದು ಶಾಸಕರಲ್ಲಿ ತಮ್ಮ ಪ್ರಮುಖ ಬೇಡಿಕೆಯನ್ನು ಇರಿಸಿದ್ದರು.

 ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಐರಿ ಸಮಾಜದವರು ಹಲವಾರು ಕಾರ್ಯಕ್ರಮಗಳ ಮೂಲಕ ತಮ್ಮ ಸಮಾಜ ಬಾಂಧವರ ಏಳಿಗೆಗಾಗಿ ಶ್ರಮಿಸುತ್ತಿರುವುದು ಅಭಿನಂದನಾರ್ಹ. ನಾಡಿನ ಅಭಿವೃದ್ಧಿಗೆ ಐರಿ ಸಮಾಜದವರ ಕೊಡುಗೆಯು ಅಪಾರವಾಗಿದೆ. ಸಮಾಜದ ಏಳಿಗೆಗೆ ತನ್ನ ಕೈಲಾದ ಎಲ್ಲಾ ಸಹಾಯ ಹಸ್ತ ತಾನು ಸದಾ ಸಿದ್ಧ ಎಂದು ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಐರಿ ಸಮಾಜದ ಅಧ್ಯಕ್ಷರು ಮೇಲತ್ತಂಡ ರಮೇಶ್, ಉಪಾಧ್ಯಕ್ಷರು ಬಬೀರ ಸರಸ್ವತಿ, ಹಾಗೂ ಸದಸ್ಯರು, ಆಡಳಿತ ಮಂಡಳಿಯವರು ಹಾಗೂ ಐರಿ ಸಮಾಜದವರು ಉಪಸ್ಥಿತರಿದ್ದರು.