ಮಡಿಕೇರಿಯಲ್ಲಿ ಶಾಂತಿನಿಕೇತನ ಗಣಪತಿ ವಿಸರ್ಜನೆ ವೈಭವ

ವರದಿ:ಅರ್ಜುನ್ ಮಡಿಕೇರಿ
ಮಡಿಕೇರಿ:ಗೌರಿ-ಗಣೇಶ ಹಬ್ಬದ ಸಡಗರ ರಾಜ್ಯದ ಹಲವೆಡೆಗಳನ್ನು ಇಂದಿಗೂ ಮುಂದುವರೆದಿದೆ. ಅದರಲ್ಲೂ, ಸಾಮಾನ್ಯವಾಗಿ ಗಣೇಶ ಮೂರ್ತಿಯ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಡಿ.ಜೆ ಹಾಕಿಕೊಂಡು ಹಾಡಿಗೆ ನೃತ್ಯ ಮಾಡಿಕೊಂಡು ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡುವುದು ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಮಂಜಿನ ನಗರಿ ಮಡಿಕೇರಿಯ ಶಾಂತಿನಿಕೇತನದ ಯುವಕ ಸಂಘದ ಸದಸ್ಯರು ಪ್ರತಿವರ್ಷವೂ ಮಡಿಕೇರಿ ದಸರಾ ಹಬ್ಬದ ಆಚರಣೆ ನೆನಪಿಸುವಂತೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುತ್ತಾರೆ.
ಅದರಲ್ಲೂ ಶಾಂತಿನಿಕೇತನದ ಯುವಕ ಸಂಘದ ಸದಸ್ಯರು ಪ್ರತಿವರ್ಷ ಪೌರಾಣಿಕ ಕಥಾ ಸಾರಾಂಶ ಅಳವಡಿಕೆ ಮಾಡಿಕೊಂಡ ಶೋಭಾಯತ್ರೆಯಲ್ಲಿ ಈ ಬಾರಿ ಗಣಪತಿಯಿಂದ ಸತ ಮಹಿಷಿಯ ಸಂಹಾರ ಎಂಬ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ರು. ರಾತ್ರಿಯಿಡೀ ನಡೆದ ಮೈನವಿರೇಳಿಸೋ ಶೋಭಾಯಾತ್ರೆ ಜನರ ಮನ ಸೂರೆಗೊಂಡಿತು, ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಸ್ಥಬ್ಧ ಚಿತ್ರ ಪ್ರದರ್ಶನ ಜನರನ್ನ ದೇವಲೋಕಕ್ಕೆ ಕರೆದೊಯ್ದಿತ್ತು.ದೇವಾನು ದೇವತೆಗಳ ಪವಾಡಕ್ಕೆ ಸಾಕ್ಷಿಯಾದರೆ ಸಹಸ್ರಾರು ಭಕ್ತರು ಭಾವಪರವಶತೆಯಲ್ಲಿ ಮಿಂದೆದ್ದರು. ಇದೇ ಸಂದರ್ಭ ಮಡಿಕೇರಿ ನಗರದ ಹಾಗೂ ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.