ಧರ್ಮದ ಮೂಲ ತತ್ವವನ್ನು ಬಿಟ್ಟು ಹಬ್ಬಗಳು ಆಚರಿಸುವುದಕ್ಕೆ ಮೌಲ್ಯವಿಲ್ಲ : ಶ್ರೀ.ಶ್ರೀ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಧರ್ಮದ ಮೂಲ ತತ್ವವನ್ನು ಬಿಟ್ಟು ಹಬ್ಬಗಳು ಆಚರಿಸುವುದಕ್ಕೆ ಮೌಲ್ಯವಿಲ್ಲ : ಶ್ರೀ.ಶ್ರೀ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ವಿರಾಜಪೇಟೆ: ಭಾರತ ದೇಶದಲ್ಲಿ ವಿವಿಧ ಧರ್ಮಗಳು ನೆಲೆ ಕಂಡಿದೆ‌‌.ಇಲ್ಲಿ ಹಬ್ಬಗಳ ಆಚರಣೆಗೆ ಕೊರತೆಗಳು ಇಲ್ಲ ಎಂದು ಅರಮೇರಿ ಕಳಂಚೇರಿ ಮಠ ಮಠಾಧೀಶರಾದ ಶ್ರೀ.ಶ್ರೀ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಸದ್ಬಾವನಾ ಮಂಚ್ ವಿರಾಜಪೇಟೆ ವತಿಯಿಂದ ನಗರದ ಸಂತ ಅನ್ನಮ್ಮ ಚರ್ಚ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಹಬ್ಬಗಳು ಮತ್ತು ಧಾರ್ಮಿಕ ಸಹಬಾಳ್ವೆ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಿತು.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಮಠಾಧೀಶರು ದೇಶದಲ್ಲಿ ಆಚರಿಸುವ ಕೆಲವು ಒಂದು ಹಬ್ಬಗಳು ಪ್ರಕೃತಿ ಗೆ ಪೂರಕವಾಗಿದೆ. ಪ್ರಕೃತಿಯನ್ನು ಗುರುವೆಂದು ಭಾವಿಸಿದ್ದರು, ನಮ್ಮ ಪೂರ್ವಜರು.ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರು ಧರ್ಮದ ಮೂಲ ತತ್ವವನ್ನು ಬದಿಗಿಟ್ಟು ಹಬ್ಬ ಹರಿದಿನಗಳನ್ನು ಆಚರಿಸುವುದಕ್ಕೆ ಮೌಲ್ಯವಿಲ್ಲ.ಇಂದಿನ ಪ್ರಸ್ತುತ ದಿನಗಳಲ್ಲಿ ಆಚರಿಸುವ ಹಬ್ಬಗಳು ವೈಭವೀಕರಿಸಿ ಆಚರಿಸುತ್ತಿರುವುದು ಧರ್ಮದ ಭಾವಗಳಿಗೆ, ಮೌಲ್ಯಗಳಿಗೆ ವಿರುದ್ಧವಾಗಿದೆ.ಹಬ್ಬಗಳ ಆಚರಣೆಗಳು ನೇರವಾಗಿ ದೇವರಲ್ಲಿ ಐಕ್ಯವಾಗುವಂತಿರಬೇಕುತೃಪ್ತಿ ದಾಯಕವಾಗಿರಬೇಕು.

ಆಡಂಬರದ ಪ್ರದರ್ಶನ ಕ್ಕೆ ಪೂರಕವಾಗಿ ಆಚರಣೆಗಳಾಗಬಾರದು. ಜಾಗೃತ ಸಮಾಜಕ್ಕೆ ಧರ್ಮಗಳ ಆಚರಣೆಗಳ ತತ್ವ ಸಂದೇಶಗಳು ಮನಮುಟ್ಟುವಂತಾಗಬೇಕು ಎಂದು ಹೇಳಿದರು.

 ಜಮಾಅತ್ ಇಸ್ಲಾಮೀ ಹಿಂದ್ ನ ಸಹ ಕಾರ್ಯದರ್ಶಿ ರಿಯಾಜ್ ಅಹಮದ್ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಹಬ್ಬಗಳ ಆಚರಣೆಗಳು ಸಮಾಜದ ಒಂದು ಭಾಗವಾಗಿದೆ.ಧರ್ಮಗಳ ತತ್ವ ಸಂದೇಶಗಳ ಕುರಿತು ಸಭೆ ಸಮಾರಂಭಗಳಲ್ಲಿ ಆರೋಗ್ಯ ಪೂರ್ಣ ಚರ್ಚೆಗಳು ನಡೆಯಬೇಕಾಗಿರುವ ಅನಿವಾರ್ಯ ಇದೆ. ಧರ್ಮಗಳ ಮಧ್ಯೆ ಇರುವ ಒಡಕು ಭ್ರಮೆಯನ್ನು ಹೋಗಲಾಡಿಸುವ ಪ್ರಯತ್ನವಾಗಬೇಕು.ಮೌಲ್ಯಗಳ ಉಳಿವಿಗಾಗಿ ಶ್ರಮ ವಹಿಸುವವನು ಅಪ್ಪಟ ದೇಶಭಕ್ತ.

ಜಗತ್ತಿನ ಒಳಿತನ್ನು ಬಯಸುವವನು ಸರ್ವೋತ್ತಮನು ಎಂದು ಕರೆಸಿಕೊಳ್ಳುತ್ತಾನೆ. ಭಾತೃತ್ವ,ಪ್ರೀತಿ,ಶಾಂತಿ ಎನ್ನುವುದು ಪ್ರಾಚೀನ ಸಂಸ್ಕೃತಿಯ ಪ್ರತೀಕವಾಗಿ ಇವುಗಳನ್ನು ಎಂದಿಗೂ ಜೀವಂತವಾಗಿರುತ್ತದೆ. ಅಂಧಕಾರ, ಭ್ರಷ್ಟಾಚಾರ, ಅಸಹಿಷ್ಣುತೆ,ಗಳ ವಿರುದ್ದ ಹೋರಾಟ ಮಾಡುವ ಗುಣಗಳನ್ನು ಸಮಾಜದ ಪ್ರತಿಯೊಬ್ಬರು ರೂಢಿಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿದೆ. ದ್ವೇಷ ಸಾಧನೆಯಿಂದ ಯಾವುದನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ. ಪ್ರೀತಿ ಶಾಂತಿಯಿಂದ ಮಾತ್ರ ನಮಗೆ ಬೇಕಾಗಿರುವುದನ್ನು ಪಡೆದುಕೊಳ್ಳಲು ಸಹಕಾರವಾಗುತ್ತದೆ ಎಂದು ಹೇಳಿದರು.

 ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ಮುಖ್ಯ ವ್ಯವಸ್ಥಾಪಕರು ರೆ. ಫಾ. ಮದುಲೈ ಮುತ್ತು ಅವರು ಮಾತನಾಡಿ,ಹಬ್ಬಗಳ ಆಚರಣೆಗಳು ಆಡಂಬರದ ಪ್ರದರ್ಶನ ಕ್ಕೆ ಸೀಮಿತವಾಗಬಾರದು. ಬದಲಿಗೆ ದೇವರಲ್ಲಿ ಲೀನವಾಗುವಂತಹ ಭಕ್ತಿ ಪ್ರದಾನವಾಗಿರಬೇಕು.ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲರಾದ ಪ್ರೋ. ಪಟ್ಟಡ ಪೂವಣ್ಣ, ವಿರಾಜಪೇಟೆ ಪುರಸಭೆಯ ಅದ್ಯಕ್ಷರಾದ ದೇಚಮ್ಮ ಕಾಳಪ್ಪ, ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷರಾದ ಸಿ.ಕೆ. ಪೂವಣ್ಣ ಅವರುಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

 ಸದ್ಬಾವನಾ ಮಂಚ್ ವಿರಾಜಪೇಟೆ ಅದ್ಯಕ್ಷರಾದ ಡಾ. ಎಂ.ಸಿ. ಕಾರ್ಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸದ್ಬಾವನಾ ಮಂಚ್ ಸ್ಥಾಪನೆಯಾಗಿ ದಶಕಗಳು ಕಳೆದಿದೆ.ಜನಸ್ನೇಹಿ ಮತ್ತು ಧಾರ್ಮಿಕ, ಹಾಗೂ ಧರ್ಮಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಮುಂದೆ ನಿರ್ಗತಿಕ ಸಮಾಜ ವ್ಯಕ್ತಿಗಳನ್ನು ಗುರುತಿಸಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಭಂದಿಸಿದಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

 ಕಾರ್ಯಕ್ರಮದ ವೇದಿಕೆಯಲ್ಲಿ ಸದ್ಬಾವನಾ ಮಂಚ್ ನ ಸದಸ್ಯರಾದ ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ ಉತ್ತಪ್ಪ, ಉದ್ಯಮಿಗಳಾದ ರಶೀದ್ ಕೆ.ಪಿ. ಚೋಪಿ ಜೋಸೆಫ್, ಕೆ.ಪಿ. ಮೊಹಮ್ಮದ್, ಪುಷ್ಪರಾಜ್ ಜೈನ್ ಹಾಜರಿದ್ದರು. ಸದ್ಬಾವನಾ ಮಂಚ್ ವಿರಾಜಪೇಟೆ ಕಾರ್ಯದರ್ಶಿ ಅಬ್ದುಲ್ ರಹಮಾನ್ ಅವರು ಸರ್ವರನ್ನು ಸ್ವಾಗತಿಸಿದರು.ಅಬ್ದುಲ್ಲಾ ಅವರು ಕಾರ್ಯಕ್ರಮ ನಿರೂಪಿ, ನೀಕ್ಷೆಪ್ ಜೈನ್ ವಂದಿಸಿದರು. ಕಾರ್ಯಕ್ರಮ ಸದ್ಬಾವನಾ ಮಂಚ್ ಪದಾಧಿಕಾರಿಗಳು ಸರ್ವ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ವರದಿ: ಕಿಶೋರ್ ಕುಮಾರ್ ಶೆಟ್ಟಿ