ತೊರೆನೂರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ| ರೈತರ ಅನುಕೂಲಕ್ಕಾಗಿ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದೆ : ಅಧ್ಯಕ್ಷ ಜಗದೀಶ್

ತೊರೆನೂರು : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ|   ರೈತರ ಅನುಕೂಲಕ್ಕಾಗಿ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದೆ : ಅಧ್ಯಕ್ಷ ಜಗದೀಶ್

ಕುಶಾಲನಗರ : ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ರೈತಾಪಿ ವರ್ಗದ ಅನುಕೂಲತೆಗಾಗಿ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿದೆ ಎಂದು ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್ ಹೇಳಿದರು.

ಸಮೀಪದ ತೊರೆನೂರು ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 2024-25ನೇ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮವಾಗಿ ಕಾರ್ಯ ಚಟುವಟಿಕೆಯೊಂದಿಗೆ ರೂ.25 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ರೂ.16.10 ಲಕ್ಷ ನಿವ್ವಳ ಲಾಭಗಳಿಸಿದೆ ಎಂದರು.

ಸಂಘದ ಸದಸ್ಯರಿಗೆ ಒಟ್ಟು ರೂ.19 ಕೋಟಿ ಸಾಲ ವಿತರಣೆ ಮಾಡಲಾಗಿದ್ದು, ಇದರಲ್ಲಿ ಕೆಸಿಸಿ ಸಾಲ ರೂ.10.5 ಕೋಟಿ ವಿತರಣೆ ಮಾಡಲಾಗಿದೆ. ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ‌ ಮೂಲಕ ಸಂಘದ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ನೀಡಿದರೇ ಇನ್ನಷ್ಟು ಲಾಭದಾಯಕ ಸಂಘವಾಗಿ ಮುಂದುವರೆಸಲು ಸಾದ್ಯ ಎಂದರು. ಸಹಕಾರಿ ಕಾನೂನು ಪ್ರಕಾರ ಒಂದು ಆಡಳಿತ ಅವಧಿಯ ಕನಿಷ್ಠ ಮೂರು ಮಹಾಸಭೆಗಳಿಗೆ ಸದಸ್ಯರು ಹಾಜರಾಗುವುದು ಕಡ್ಡಾಯ. ತಪ್ಪಿದಲ್ಲಿ ಸದರಿ ಸದಸ್ಯತ್ವವನ್ನು ತಟಸ್ಥವಾಗುವುದು ಎಂದು ಹೇಳಿದರು.ಹೆಬ್ಬಾಲೆ ಬಾಣವಾರ ರಸ್ತೆಯಲ್ಲಿರುವ ಸಂಘದ ಮೂಳೆ ಮಿಷನ್ ಜಾಗವನ್ನು ಅಳತೆ ಮಾಡಿ ಹದ್ದು ಬಸ್ಸು ಮಾಡಬೇಕು ಎಂದು ಸದಸ್ಯ ಪಾಂಡುರಂಗ ಸಲಹೆ ನೀಡಿದರು.

ಸದಸ್ಯರು ಮರಣ ನಿಧಿಗೆ ರೂ.2000 ಹಣ ಪಾವತಿ ಮಾಡಬೇಕು.ಸದಸ್ಯರು ಮರಣಹೊಂದಿದರೆ ಅವರ ಕುಟುಂಬಕ್ಕೆ ರೂ.15 ಸಾವಿರ ವಿತರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಪ್ರೀತು , ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು.

ಸಂಘದ ಉಪಾಧ್ಯಕ್ಷೆ ಗೌರಮಣಿ ನಿರ್ದೇಶಕರಾದ ಕೆ.ಎಸ್.ಕೃಷ್ಣೇಗೌಡ,ಎಚ್.ಬಿ.ಚಂದ್ರಪ್ಪ,ಕೆ.ಬಿ.ದೇವರಾಜ್,ಉದಯಕುಮಾರ್,ಎಚ್.ಟಿ.ಕುಶಾಲಪ್ಪ,ಎಚ್.ಸಿ.ಮೂರ್ತಿ,ಟಿ.ಜೆ.ರವಿಕುಮಾರ್,ಟಿ.ಎ.ರವಿಚಂದ್ರ,ಟಿ.ಎಸ್.ಹರೀಶ್,ಹೇಮಾ, ಮೇಲ್ವಿಚಾರಕ ಭರತ್ ಕುಮಾರ್ ಪಾಲ್ಗೊಂಡಿದ್ದರು. ಸಭೆಯ ಮೊದಲಿಗೆ ನಡೆದ ಚರ್ಚೆಯಲ್ಲಿ.ಸದಸ್ಯರಾದ ಲೋಕೇಶ್, ಈಶ್ಚರ, ಚಂದ್ರಣ್ಣ, ರವಿ ,ಗಣೇಶ್,ಮೋಹನ್ ಮತ್ತಿತರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ನಂತರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು. ಕುಶಾಲನಗರ ಸಮೀಪದ ತೊರೆನೂರು ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್ ಮಾತನಾಡಿದರು.