ವಿರಾಜಪೇಟೆ: ಗೌರಿ-ಗಣೇಶೋತ್ಸವ ಶೋಭಯಾತ್ರೆಯಲ್ಲಿ ಶಬ್ದ ಮಾಲಿನ್ಯ ಉಂಟಾಗಿದೆ ಎಂದು ಸ್ವಯಂ‌ ಪ್ರೇರಿತ ಪ್ರಕರಣ ದಾಖಲಿಸಿರುವುದು ಸಮಂಜಸವಲ್ಲ: ವಿರಾಜಪೇಟೆ ನಾಗರಿಕ ಸಮಿತಿ ಆರೋಪ

ವಿರಾಜಪೇಟೆ: ಗೌರಿ-ಗಣೇಶೋತ್ಸವ ಶೋಭಯಾತ್ರೆಯಲ್ಲಿ ಶಬ್ದ ಮಾಲಿನ್ಯ ಉಂಟಾಗಿದೆ  ಎಂದು ಸ್ವಯಂ‌ ಪ್ರೇರಿತ ಪ್ರಕರಣ ದಾಖಲಿಸಿರುವುದು ಸಮಂಜಸವಲ್ಲ: ವಿರಾಜಪೇಟೆ ನಾಗರಿಕ ಸಮಿತಿ ಆರೋಪ

ವೀರಾಜಪೇಟೆ: ನಾಗರಿಕರಿಗೆ ಸಕಲ ಸೌಲಭ್ಯ ನೀಡುವುದು ಇಲಾಖೆಗಳ ಕರ್ತವ್ಯ. ಆದರೆ ಇಲಾಖೆಗಳು ಮಾಡುವ ತಪ್ಪನ್ನು ತಿಳಿದು ದೂರು ನೀಡಿದರೆ,ಪೊಲೀಸ್ ಇಲಾಖೆಯು ಮೌನ ವಹಿಸುತ್ತದೆ.ಕೆಲ ಕಾಲ ನಡೆದ ಶಬ್ದ ಮಾಲಿನ್ಯ ಎಂದು ಪೋಲಿಸ್ ಇಲಾಖೆಯು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದು ಸಮಂಜಸವಲ್ಲ ಎಂದು, ನಾಗರಿಕ ಸಮಿತಿ ವಿರಾಜಪೇಟೆ ವತಿಯಿಂದ ನಗರದ ದೊಡ್ಡಟ್ಟಿ ಚೌಕಿ ಗೃಹ ಕಛೇರಿಯಲ್ಲಿ "ಪೊಲೀಸ್ ಇಲಾಖೆಯ ಕ್ರಮದ ಬಗ್ಗೆ ಅಸಮಧಾನ" ಎಂಬ ವಿಷಯದ ಬಗ್ಗೆ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಗರಿಕ ಸಮಿತಿಯ ಸಂಚಾಲಕರಾದ ಡಾ. ಇ.ಆರ್ ದುರ್ಗಾಪ್ರಸಾದ್,

ಸೆಪ್ಟೆಂಬರ್ 06ರಂದು ನಗರದಲ್ಲಿ ಇತಿಹಾಸ ಪ್ರಸಿದ್ಧ ಹೊಂದಿರುವ ಗೌರಿ ಗಣೇಶೋತ್ಸವ ಸಮಿತಿಗಳ ಉತ್ಸವ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನಡೆಯಿತು. ಈ ಸಂದರ್ಭದಲ್ಲಿ ಕೆಲವು ಸಮಿತಿಗಳು ಡಿ.ಜೆ ಸಂಗೀತವನ್ನು ಬಳಸಿದ್ದರು. ಇಲ್ಲಿ ನಿಗದಿತ ಶಬ್ದಕ್ಕಿಂತ ಮಿತಿಮೀರಿದ ಬಳಕೆ ಎಂದು ಕೆಲವು ಸಮಿತಿಗಳ ಮೇಲೆ ಇಲಾಖೆಯ ಕ್ರಮ ಜರುಗಿಸಿರುವುದು ಸ್ವಾಗತಾರ್ಹ ಶಬ್ದ ಮಾಲಿನ್ಯವಾಗಿದೆ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ ಪರಿಸರಕ್ಕೆ ಮಾರಕವಾಗುವ ರೀತಿಯಲ್ಲಿ ರಸ್ತೆಗಳಲ್ಲಿ ಗುಂಡಿಗಳು ಇರುವುದರಿಂದ ವಾಹನಗಳನ್ನು ಉಗುಳುವ ಹೊಗೆಯು ಪರಿಸರಕ್ಕೆ ಮಾರಕವಾಗುತ್ತಿದೆ. ನಗರದಲ್ಲಿ ಉತ್ಪಾದನೆಯಾಗುವ ಘನ ತ್ಯಾಜ್ಯ ನೀರು ನದಿಯ ಒಡಲು ಸೇರುತ್ತಿದೆ ಎಂದು ಆರೋಪಿಸಿದ ಅವರು, ಅವೈಜ್ಞಾನಿಕವಾಗಿ ಕಸವಿಲೇವಾರಿಯಾಗುತ್ತಿರುವುದು, ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದು ಹೀಗೆ ಹಲವು, ಸ್ವಚ್ಚಂದ ಪರಿಸರ ನಿರ್ಮಾಣಕ್ಕೆ ಕೆಲವು ಇಲಾಖೆಗಳು ಪೂರಕವಾಗಿ ಕರ್ತವ್ಯ ನಿರ್ವಹಿಸದೆ ಇರುವುದರಿಂದ ಇಲಾಖೆಗಳ ಮೇಲೆ ದೂರು ಸಲ್ಲಿಸಿದ್ದರು ಪೊಲೀಸ್ ಇಲಾಖೆಯು ದೂರು ದಾಖಲಾದ ಇಲಾಖೆಗಳ ಮೇಲೆ ಕ್ರಮಕ್ಕೆ ಮುಂದಾಗಲಿಲ್ಲಾ.

 ಕೆಲವು ಗಂಟೆ ಅಥಾವ ಒಂದು ರಾತ್ರಿಯ ಮಟ್ಟಿಗೆ ಶಬ್ದ ಮಾಲಿನ್ಯ ಎಂದಾದರೆ, ಪರಿಸರದ ಮೇಲೆ ದಿನನಿತ್ಯ ದೌರ್ಜನ್ಯ ನಡೆಯುತ್ತಿದ್ದರು ಪೊಲೀಸು ಇಲಾಖೆಯು ದೂರು ದಾಖಲಿಸದೆ ಇರುವುದು ತಾರತಮ್ಯ ಎಸೆಗಿದಂತಾಗಿದೆ ಎಂದು ದುರ್ಗಾ ಪ್ರಸಾದ್ ಆರೋಪಿಸಿದರು. ಸಂಭದಿಸಿದ ಇಲಾಖೆಗಳು ಕರ್ತವ್ಯ ಮರೆತಿದೆ. ಇಲಾಖೆಗಳ ಮೇಲೆಯು ಪೊಲೀಸು ಇಲಾಖೆ ಕ್ರಮಕ್ಕೆ ಮುಂದಾಗಬೇಕು ನಾಗರಿಕ ಸಮಿತಿ ಒತ್ತಾಯ ಮಾಡುತ್ತಿದೆ ಎಂದು ಹೇಳಿದರು.

ನಾಗರಿಕ ಸಮಿತಿಯ ಸಹ ಸದಸ್ಯರಾದ ವಕೀಲರಾದ ಸೋಮಲೋಕನಾಥ ಅವರು ಮಾತನಾಡಿ, ವಿರಾಜಪೇಟೆ ಪುರಸಭೆಯು ಹೊಂದಿರುವ ಕಸ ವಿಲೇವಾರಿ ವಾಹನಗಳಿಗೆ ವಿಮೆ ಮತ್ತು ಫಿಟ್ನೆಸ್ ಸರ್ಟಿಪಿಕೇಟ್ ಇಲ್ಲ. ಕ್ರಮಕ್ಕೆ ಆಗ್ರಹ ಎಂದು ದೂರು ಸಲ್ಲಿಸಲಾಗಿದ್ದು ಇಲಾಖೆಯ ವಿರುದ್ದ ಕ್ರಮ ಜರುಗಿಸಬೇಕು ಎಂದು ಪೊಲೀಸು ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ಮತ್ತು ಪ್ರಾದೇಶಿಕ ಸಾರಿಗೆ ನಿರ್ಧೇಶಕರು ಇವರುಗಳಿಗೆ ನಾಗರಿಕ ಸಮಿತಿ ದಿನಾಂಕ 22-07-2022 ರಲ್ಲಿ ದೂರು ನೀಡಿತ್ತು. ಆದರೆ ದೂರು ನೀಡಿ ಮೂರು ವರ್ಷ ಕಳೆದರು ಇಂದಿಗೂ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಲಿಲ್ಲಾ. ದೂರು ಅರ್ಜಿಯನ್ನು ಸುದ್ದಿಗಾರರ ಮುಂದೆ ಪ್ರದರ್ಶನ ಮಾಡಿದರು. ಸಾರ್ವಜನಿಕರು ನೀಡಿದ ದೂರು ಅರ್ಜಿ ಕಸದ ಬುಟ್ಟಿಗೆ ಎಂದಾಯಿತು ಎಂದು ಆರೋಪಿಸಿದರು. ತ್ಯಾಜ್ಯ ನೀರು ನದಿಮೂಲವನ್ನು ಸೇರುತ್ತಿದೆ. ನಗರದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದಿಂದ ರೋಗ ರುಜಿನಗಳು ಹರಡುತಿದೆ. ತನ್ನ ಕರ್ತವ್ಯ ಮರೆತ ಇಲಾಖೆಗಳ ವಿರುದ್ದ ದೂರು ನೀಡಿದಲ್ಲಿ ಪೊಲೀಸ್ ಇಲಾಖೆಯು ಯಾವುದೇ ಕ್ರಮ ಜರುಗಿಸಲಿಲ್ಲಾ. ಆದರೆ ಡಿ.ಜೆ. ಬಳಕೆ ಮಾಡಿದ ಸಮಿತಿಗಳ ವಿರುದ್ದ ನಿಗದಿತ ಶಬ್ದ ಮಿತಿಮೀರಿದೆ ಎಂದು ಸ್ವಯಂ‌ಪ್ರೇರಿತ ದೂರು ದಾಖಲಿಸಿಕೊಂಡಿದೆ. ಅದು ಕೆಲವೇ ಗಂಟೆಗಳಲ್ಲಿ,ಇದು ವಿಪರ್ಯಸವಾಗಿದೆ. ಇಲ್ಲಿ ಇಲಾಖೆಗಳಿಗೆ ಒಂದು ಕಾನೂನು ಸಾರ್ವಜನಿಕರಿಗೆ ಒಂದು ಕಾನೂನು ಎಂದು ಆರೋಪಿಸಿದರು. ಸಮಾಜಕ್ಕೆ ಪೂಕರವಾಗಿ ಪೊಲೀಸ್ ಇಲಾಖೆಯು ಕ್ರಮ ಜರುಗಿಸುವಂತಾಗಬೇಕು ಎಂದು ನಾಗರಿಕ ಸಮಿತಿ ಆಗ್ರಹಿಸುತ್ತಿದೆ ಅವರು ಎಂದು ಹೇಳಿದರು.

ವರದಿ: ಕಿಶೋರ್ ಕುಮಾರ್ ಶೆಟ್ಟಿ