ವಿರಾಜಪೇಟೆ: ಚೆಕ್ ಬೌನ್ಸ್ ,ಶಿಕ್ಷೆ ಪ್ರಕಟ

ವಿರಾಜಪೇಟೆ: ಚೆಕ್ ಬೌನ್ಸ್ ,ಶಿಕ್ಷೆ ಪ್ರಕಟ

ವಿರಾಜಪೇಟೆ,ಡಿ 11: ಆಸ್ತಿ ಮಾರಾಟ ಮಾಡುತ್ತೇನೆ ಎಂದು ಹಣ ಪಡೆದು ಚೆಕ್ ನೀಡಿದ್ದರು.ಹಣ ಮರಳಿಸಲು ವಿಫಲವಾದ ಹಿನ್ನಲೆಯಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸಿದ್ದಾಪುರ ಪುಲಿಯೇರಿ ಗ್ರಾಮದ ನಿವಾಸಿ ಮಂಡೇಪಂಡ ದೇವಯ್ಯ ಅವರ ಪುತ್ರ ಎಂ.ಡಿ. ಸುಬ್ಬಯ್ಯ ಶಿಕ್ಷೆಗೆ ಗುರಿಯಾದ ವ್ಯಕ್ತಿ.ಸಿದ್ದಾಪುರ, ಹೈಸ್ಕೂಲು ರಸ್ತೆ ನಿವಾಸಿ ಉದ್ಯಮಿ ಬಿ.ಎಸ್, ಬಾಲಕೃಷ್ಣ ರೈ ಅವರಿಂದ ಆಸ್ತಿ ಮಾರಾಟ ಮಾಡುತ್ತೇನೆ ಎಂದು ಸುಬ್ಬಯ್ಯ ಅವರು ತಾ.17/03/2014 ರಲ್ಲಿ 7,60,000 ರೂ ಮತ್ತು 8,00,000 ರೂ ಪಡೆದಿದ್ದರು. ಹಣ ಪಡೆದು ಭದ್ರತಾ ಠೇವಣಿಗಾಗಿ ರಲ್ಲಿ ಕಾರ್ಪೋರೇಷನ್ ಬ್ಯಾಂಕ್ ನೆಲ್ಯಹುದಿಕೇರಿ ಶಾಖೆಯ ಸ್ವತ: ಖಾತೆಯ ಚೆಕ್ ನೀಡಿದ್ದರು.

ಸುಬ್ಬಯ್ಯ ಆಸ್ತಿ ನೀಡದೆ ಇತರೆ ಸಬೂಬು ಹೇಳಿಕೊಂಡು ಸತಾಯಿಸುತಿದ್ದರು.ಆಸ್ತಿ ಬೇಡ ನೀಡಿರುವ ಹಣ ಹಣ ಹಿಂದಿರುಗಿಸು ಎಂದು ಬಾಲಕೃಷ್ಣ ಒತ್ತಾಯ ಮಾಡಿದ್ದರು. ನಂತರ 22/05/2014 ರಲ್ಲಿ ನೀಡಿರುವ ಚೆಕ್ ಬ್ಯಾಂಕ್ ಖಾತೆಗೆ ನೀಡಿದ್ದರು. ಬ್ಯಾಂಕ್ ಖಾತೆ ನಿಗದಿತ ಹಣ ಇಲ್ಲದಿರುವುದು ಧೃಡಪಟ್ಟಿದೆ.

ಬಾಲಕೃಷ್ಣ ಅವರು ಸುಬ್ಬಯ್ಯ ವಿರುದ್ದ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯವು ಸುಧೀರ್ಘವಾಗಿ ವಿಚಾರಣೆ ನಡೆಸಿ ತಾ.09.10.2025 ರಂದು 138 ಎನ್.ಐ. ಕಾಯ್ದೆ ಅನ್ವಯ ಮುಂಗಡ ಮೂಲ ಹಣಕ್ಕೆ 2,000 ರೂ ದಂಡ ಮತ್ತು 06 ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಪ್ರಧಾನ ಸಿವಿಲ್ ನ್ಯಾಯಾಲಯ. ಜೆ.ಎಂ.ಎಫ್.ಸಿ ವಿರಾಜಪೇಟೆ ಗೌ. ನ್ಯಾಯಾಧಿಶರು ತೀರ್ಪು ನೀಡಿದರು. ಸಂತ್ರಸ್ತರ ಪರವಾಗಿ ಬಿ.ಆರ್. ಶೆಟ್ಟಿ ವಾದಿಸಿದ್ದಾರೆ.

Report: Kishore ಕುಮಾರ್ ಶೆಟ್ಟಿ