ಕೊಡಗಿನ ಇತಿಹಾಸದಲ್ಲೇ‌ ಮೊದಲ ಬಾರಿಗೆ ಗಲ್ಲು ಶಿಕ್ಷೆ: ಬೇಗೂರು ಬಾಳೆಯಂಗಡ್ ನಲ್ಲಿ ಮಾರ್ಚ್ 27ರಂದು ನಡೆದದ್ದೇನು ಗೊತ್ತಾ;

ಕೊಡಗಿನ ಇತಿಹಾಸದಲ್ಲೇ‌ ಮೊದಲ ಬಾರಿಗೆ ಗಲ್ಲು ಶಿಕ್ಷೆ:  ಬೇಗೂರು ಬಾಳೆಯಂಗಡ್ ನಲ್ಲಿ ಮಾರ್ಚ್ 27ರಂದು ನಡೆದದ್ದೇನು ಗೊತ್ತಾ;
ಗಿರೀಶ್

ವಿರಾಜಪೇಟೆ:: ಅಕ್ರಮ ಸಂಬಂಧ ಎಂದು ಸಂಶಯದಿಂದ ಕೋಪಗೊಂಡ ವ್ಯಕ್ತಿ ಪತ್ನಿ, ಮಗಳು, ಅಜ್ಜ, ಅಜ್ಜಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಅಧಿಕ ಜಿಲ್ಲಾ ಮತು ಸೆಷನ್ಸ್ ನ್ಯಾಯಾಲಯ ವಿರಾಜಪೇಟೆ ಐತಿಹಾಸಿಕ ತೀರ್ಪು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಬುಧವಾರ ನೀಡಿದೆ.ಕೇರಳ ರಾಜ್ಯದ ವೈನಾಡ್ ಜಿಲ್ಲೆ ತಿರುನಲ್ಲಿ ಅಪ್ಪಪಾರೆ ನಿವಾಸಿ ಗಿರೀಶ್ (38) ವರ್ಷ ಗಲ್ಲು ಶಿಕ್ಷೆಗೆ ಗುರಿಯಾದ ವ್ಯಕ್ತಿ.

ಜೇನು ಕುರುಬರ ಕರಿಯ, ಪತ್ನಿ ಗೌರಿ ಮೊಮ್ಮಗಳು ನಾಗಿ (ಆರೋಪಿಯ ಪತ್ನಿ) ಮಗಳು ಕಾವೇರಿ ( 06)ವರ್ಷ ಆರೋಪಿ ಗಿರೀಶ್ ನಿಂದ ಹತ್ಯೆಯಾದ ದುರ್ದೈವಿಗಳು.

ಘಟನೆ ಸಾರಂಶ:

ಪೊನ್ನಂಪೇಟೆ ತಾಲೂಕು, ಬೇಗೂರು, ಬಾಳೆಯಂಗಾಡ್ ಗ್ರಾಮದ ಚೋಡುಮಾಡ ವಿಕ್ರಂ ಎಂಬುವವರ ತೋಟದ ಸನಿಹ ಜೇನುಕುರುಬರ ಕರಿಯ ಮತ್ತು ಸಂಸಾರ ಒಂದು ಎಕ್ರೆ ಕಾಫಿ ತೋಟ ಹೊಂದಿಕೊಂಡು ವಾಸವಾಗಿದ್ದರು. ಕರಿಯ ಅವರ ಮೊಮ್ಮಗಳು ನಾಗಿ ಎರಡು ಮದುವೆಯಾಗಿದ್ದು ಈರ್ವರನ್ನು ತ್ಯಜಿಸಿದ್ದಳು. ನಂತರ ಕೇರಳ ಮೂಲದ ಗಿರೀಶ್ ಎಂಬುವವನನ್ನು ಮೂರನೇ ಮದುವೆಯಾಗಿದ್ದು ಒಂದು ತಿಂಗಳು ಗಿರೀಶ್ ಮನೆಯಲ್ಲಿ ವಾಸವಿದ್ದಳು.ಮೊದಲ ಪತಿಯೊಂದ್ದಿಗಿದ್ದ ಜೀವನದಲ್ಲಿ ಕಾವೇರಿ ಎಂಬ 06 ವರ್ಷದ ಮಗಳು ಹೊಂದಿದ್ದಳು ನಾಗಿ.

ಇತ್ತಾ ನಾಗಿಯ ಅಜ್ಜ ಕರಿಯಾ ಹೊಂದಿರುವ ಕಾಫಿ ತೋಟದಲ್ಲಿ ಉತ್ತಮ ವರಮಾನ ಬರುತ್ತದೆ ಎಂಬ ಕಲ್ಪನೆಯಲ್ಲಿ ಗಿರೀಶ್ ಮತ್ತು ನಾಗಿ ಹಾಗೂ ಮಗಳು ಕಾವೇರಿ ಬೇಗೂರಿನ ಅಜ್ಜನ ಮನೆಗೆ ಬಂದು ನೆಲೆಸುತ್ತಾರೆ. ದಿನ‌ ಕಳೆದಂತೆ ಗಿರೀಶ್ ತನ್ನ ವರಸೆ ತೋರಿಸಿದ್ದ, ಪತ್ನಿ ನಾಗಿಗೆ ಬಡಿಗೆಯಿಂದ ಹೊಡೆಯುವುದು, ವೃದ್ಧ ದಂಪತಿಗಳಿಗೆ ಹಣಕ್ಕಾಗಿ ಪೀಡಿಸುವುದು ಮಾಡುತಿದ್ದ, ದಿನಾಂಕ 27-03-2025 ರಂದು ರಾತ್ರಿ ಗಿರೀಶ್ ಮತ್ತು ಪತ್ನಿ ನಾಗಿ ಉಪಹಾರ ಮುಗಿಸಿ ವಠಾರದಲ್ಲಿ ಕುಳಿತಿರುವ ಸಮಯ ಏಕಾಏಕಿ ಗಿರೀಶ್ ಜಗಳಕ್ಕೆ ಮುಂದಾಗುತ್ತಾನೆ, ನೀನು ಸುಬ್ರಮಣಿಯೋಂದಿಗೆ ಅಕ್ರಮ ಸಂಬಂಧ ಹೊಂದಿದ್ದೀಯ...

ನಿನ್ನ ಅಜ್ಜ, ಅಜ್ಜಿ ಕಾಫಿ ಮಾರಾಟ ಮಾಡಿದ ಹಣ ನೀಡುತ್ತಿಲ್ಲಾ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳುತ್ತಾನೆ. ಓರ್ವರ ನಡುವೆ ಕಲಹ ಏರ್ಪಡುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಮಂಡೆ ಕತ್ತಿಯಿಂದ ನಾಗಿಗೆ ಮನ ಬಂದಂದತೆ ಕೊಚ್ಚುತ್ತಾನೆ.ಚೀರಾಟ ಮಾಡುತ್ತಾ ರಕ್ತದ ಮಡುವಿನಲ್ಲಿದ್ದ ನಾಗಿಯ ಚೀರಾಟ ಕಂಡು ಅಜ್ಜ ಕರಿಯ ಮತು ಗೌರಿ ಸ್ಥಳಕ್ಕೆ ಆಗಮಿಸುತ್ತಾರೆ ತಡೆಯಲು ಪ್ರಯತ್ನಿಸುತ್ತಾರೆ.

ಈ ವೇಳೆ ಕರಿಯ ಮತು ಗೌರಿ ಮೇಲೆ ಕತ್ತಿಯಿಂದ ಪ್ರಹಾರ ಮಾಡುತ್ತಾನೆ.ಬಳಿಕ 06 ವರ್ಷದ ಮಗು ಕಾವೇರಿಯನ್ನು ಮಗು ಎಂದು ಭಾವಿಸದೆ, ಮಗುವನ್ನು ಕತ್ತಿಯಿಂದ ಕಡಿದು ಕೊಲೆ ಮಾಡುತ್ತಾನೆ. ಪರಿಣಾಮ ಪತ್ನಿ ನಾಗಿ, ನಾಗಿಯ ಅಜ್ಜ ಕರಿಯ, ಅಜ್ಜಿ ಗೌರಿ ಮತ್ತು ಮಗಳು ಕಾವೇರಿ ಬರ್ಬರವಾಗಿ ಕೊಲೆಯಾಗಿ ರಕ್ತದ ಮಡುವಿನಲ್ಲಿರುತ್ತಾರೆ.

ನಾಲ್ವರನ್ನು ಹತ್ಯೆಗೈದು ಗಿರೀಶ್ ಸ್ಥಳದಿಂದ ಪರಾರಿಯಾಗುತ್ತಾನೆ. ಮರು ದಿನ ತಾ.28-03-2025 ಸುಮಾರು ಮಧ್ಯಾಹ್ನ 12 ರ ವೇಳೆಯಲ್ಲಿ ಚೋಡುಮಾಡ ವಿಕ್ರಂ ಅವರು ಕರಿಯ ಬಂದಿಲ್ಲಾ ಎಂದು ಸ್ಥಳಕ್ಕೆ ತೆರಳುತ್ತಾರೆ. ಮನೆಯಲ್ಲಿ ನಾಲ್ವರ ರಕ್ತಸಿಕ್ತ ದೇಹಗಳು ಕಂಡುಬರುತ್ತದೆ. ತಕ್ಷಣವೇ ಪೊನ್ನಂಪೇಟೆ ಪೊಲೀಸು ಠಾಣೆಗೆ ಮಾಹಿತಿ ನೀಡಿದರು.

ವಿಕ್ರಮ ಅವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸು ಠಾಣೆಯಲ್ಲಿ ಬಿ.ಎನ್.ಎಸ್ ಯು/ಎಸ್ -103(1) ಕೊಲೆ ಪ್ರಕರಣ ದಾಖಲಾಗುತ್ತದೆ. ಕೃತ್ಯ ನಡೆಸಿದ ಆರೋಪಿ ತಲೆಮರಿಸಿಕೊಂಡು ಕೇರಳ ಕ್ಕೆ ಪರಾರಿಯಾಗಿದ್ದ ನಂತರ ಸುಳಿವು ಅರಿತ ಪೊಲೀಸರು ವಯನಾಡ್ ಅಪ್ಪಪಾರೆ ಎಂಬಲ್ಲಿ ಪೊಲೀಸರು ಬಂದಿಸುತ್ತಾರೆ.

ಸದರಿ ಪ್ರಕರಣವು ನ್ಯಾಯಾಲಯದಲ್ಲಿ ತ್ವರಿತಗತಿಯಲ್ಲಿ ವಿಚಾರಣೆ ನಡೆಸುತ್ತಾರೆ. ಒಂದುವಾರದಲ್ಲಿ ಸಾಕ್ಷಿಗಳಳನ್ನು ವಿಚಾರಣೆ ಒಳಪಡಿಸಲಾಗುತ್ತದೆ. ಸರ್ಕಾರದ ಪರವಾಗಿ ಸುಧೀರ್ಘವಾಗಿ ವಾದ ಮಂಡಿಸಿದ ಸರ್ಕಾರಿ ಅಬಿಯೋಜಕರಾದ ಯಾಸೀನ್ ಅಹ್ಮದ್ ಅವರು ವಾದ ಮಂಡಿಸುತ್ತಾರೆ.

ತಾ. 28-11-2025 ರಂದು 2ನೇ ಅದಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿತನಿಗೆ ಕಲಂ. 103(1), 238 ಬಿ.ಎಸ್.ಎಸ್ ಅಡಿಯಲ್ಲಿ ದೋಷಿ ಎಂದು ಪರಿಗಣಿಸುತ್ತದೆ. ತಾ. 10-12-2025 ರಂದು 2ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿರಾಜಪೇಟೆ ಗೌ. ನ್ಯಾ. ನಟರಾಜ್ ಎಸ್ ಅವರು ಆರೋಪಿಗೆ ಗಲ್ಲು ಶಿಕ್ಷೇ ನೀಡಿ ತೀರ್ಪು ನೀಡಿರುತ್ತಾರೆ. “ರಾತ್ರಿಯ ನಿಶಬ್ಧತೆಯ ಮಧ್ಯೆ ವೃದ್ದರು ಮಕ್ಕಳು ಸೇರಿ ನಾಲ್ಕು ನಿರಪರಾಧ ಜೀವಗಳು ಮನೆಯಲ್ಲಿ ಕೊನೆಯುಸಿರೆಳದಾಗ ಅದರ ಮೌನಕ್ಕೆ ಉತ್ತರಿಸುವುದು ಕಾನೂನಿನ ಕರ್ತವ್ಯ.”..... ಎಂದು ನ್ಯಾಯಾಲಯವು ಮನಗಂಡಿತು.

ವರದಿ:ಕಿಶೋರ್ ಕುಮಾರ್ ಶೆಟ್ಟಿ