ವಿರಾಜಪೇಟೆ: ಮನೆಯ ಬಾಗಿಲ ಮುಂದೆ ವಾಮಚಾರ!!
ವಿರಾಜಪೇಟೆ:ಪಟ್ಟಣದ ಮೊಗರಗಲ್ಲಿಯಲ್ಲಿ ಮನೆಯೊಂದರ ಬಾಗಿಲ ಮುಂದೆ ಶುಕ್ರವಾರ ಕಿಡಿಗೇಡಿಗಳು ವಾಮಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಮನೆಯ ಮಾಲೀಕ ಮಹಮ್ಮದ್ ಅಕ್ಬರ್ ಅವರು ಬೆಳಗ್ಗೆ ಮಸೀದಿ ಗೆ ತೆರಳುವ ಸಂದರ್ಭದಲ್ಲಿ ಯಾವುದೇ ಘಟನೆ ನಡೆದಿರಲಿಲ್ಲ. ಮಸೀದಿಯಿಂದ ಹಿಂತಿರುಗಿ ಮನೆಗೆ ಬಂದಾಗಲೂ ಕೂಡ ಯಾವುದೇ ಘಟನೆ ನಡೆದಿರಲಿಲ್ಲ. ಆದರೆ ನಂತರ ಮನೆಯ ಬಾಗಿಲು ತೆರೆದು ನೋಡಿದಾಗ ವಾಮಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
