ವಿರಾಜಪೇಟೆ: ಸುಗಮ ಶೋಭಯಾತ್ರೆಗೆ 1200 ಮಂದಿ ಪೊಲೀಸ್ ಸಿಬ್ಬಂದಿಗಳ ಕಾರ್ಯನಿರ್ವಹಣೆ

ವಿರಾಜಪೇಟೆ: ಸುಗಮ ಶೋಭಯಾತ್ರೆಗೆ 1200 ಮಂದಿ ಪೊಲೀಸ್  ಸಿಬ್ಬಂದಿಗಳ ಕಾರ್ಯನಿರ್ವಹಣೆ

ವಿರಾಜಪೇಟೆ:ಇತಿಹಾಸ ಪ್ರಸಿದ್ಧ ವಿರಾಜಪೇಟೆಯ ಗೌರಿ ಗಣೇಶೋತ್ಸವ ಸಮಿತಿಗಳ ಗೌರಿ-ಗಣೇಶೋತ್ಸವ ವಿಸರ್ಜನಾ ಕಾರ್ಯಕ್ರಮ ಸುಗಮವಾಗಿ ನಡೆಯಲು ಮತ್ತು ಅಹಿತಕರ ಘಟನೆಗಳು ಸಂಭವಿಸದಂತೆ ಆರಕ್ಷಕ ಇಲಾಖಯ ದಕ್ಷಿಣ ವಲಯ ಪೊಲೀಸ್ ‌ಮಹಾ ನಿರ್ದೇಶಕರಾದ ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಕಲ್ಪಿಸಲಾಗಿತ್ತು. ಶೋಭಯಾತ್ರೆಗೆ ಮೈಸೂರು ಜಿಲ್ಲೆ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದ 1200 ಮಂದಿ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್, ಸೇರಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ. ಅಪರಾಧ ತನಿಖಾ ದಳ, ಗುಪ್ತಚರ ಇಲಾಖೆ ಬಾಂಬ್ ಸ್ಕಾಡ್, ಡಾಗ್ ಸ್ಕಾಡ್,ಅಗ್ನಿ ಶಾಮಕ ಧಳ, ಕೆ.ಎಸ್.ಆರ್.ಪಿ. ತುಕಡಿ 04, ಡಿ.ಎ.ಆರ್ ತುಕಡಿ 04,ಜಿಲ್ಲೆಯ ಎಲ್ಲಾ ಠಾಣೆಗಳ ಸಿಬ್ಬಂದಿಗಳು, ಜಂಬೋ ಟೀಮ್, ಡಿ.ವೈ.ಎಸ್ಪಿ 07 ಮಂದಿ ಹಾಗೂ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳು 1200 ಮಂದಿ ಹಾಗೂ ಮೆರವಣಿಗೆ ತೆರಳುವ ಎಲ್ಲಾ ಮಾರ್ಗದಲ್ಲಿ ಚಲನವಲನ ಕಣ್ಗಾವಲು ಮಾಡಲು ಸಿ.ಸಿ. ಕ್ಯಾಮರಾ ಅಳವಡಿಸಲಾಗಿತ್ತು. ರಾಜ್ಯ ಹೆದ್ದಾರಿ ಪೆರುಂಬಾಡಿ ತನಿಖಾ ಕೇಂದ್ರದಲ್ಲಿ ಹೆಚ್ಚುವರಿ ಬಂದೋಬಸ್ತು ಕಲ್ಪಿಸಲಾಗಿತ್ತು.

 ವರದಿ:ಕಿಶೋರ್ ಕುಮಾರ್ ಶೆಟ್ಟಿ ವಿರಾಜಪೇಟೆ