IPL 2025: ಫ್ಲೇ-ಆಫ್ ಹಾಗೂ ಫೈನಲ್ ಪಂದ್ಯದ ಸ್ಥಳ ಬದಲಾವಣೆ

IPL 2025: ಫ್ಲೇ-ಆಫ್ ಹಾಗೂ ಫೈನಲ್ ಪಂದ್ಯದ ಸ್ಥಳ ಬದಲಾವಣೆ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ಲೇ-ಆಫ್ ಮತ್ತು ಫೈನಲ್ ಪಂದ್ಯಗಳು ನಡೆಯುವ ಸ್ಥಳಗಳನ್ನು ಬದಲಾಯಿಸಿ ಇದೀಗ ಹೊಸದಾಗಿ ಪ್ರಕಟಿಸಲಾಗಿದೆ. ಆರಂಭದಲ್ಲಿ, ಕೊನೆಯ ನಾಲ್ಕು ಪಂದ್ಯಗಳು ಹೈದರಾಬಾದ್ ಮತ್ತು ಕೋಲ್ಕತಗಳಲ್ಲಿ ನಡೆಯುವುದೆಂದು ನಿಗದಿಯಾಗಿತ್ತು.ಆದರೆ, ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಪಂದ್ಯಾವಳಿಯು ಒಂದು ವಾರ ಸ್ಥಗಿತಗೊಂಡ ಬಳಿಕ ಪರಿಸ್ಥಿತಿ ಬದಲಾಗಿದೆ. ಈಗ ಪ್ಲೇ-ಆಫ್ ಪಂದ್ಯಗಳು ಮುಲ್ಲನ್‌ಪುರ ಮತ್ತು ಅಹ್ಮದಾಬಾದ್‌ನಲ್ಲಿ ನಡೆಯಲು ನಿಗದಿಯಾಗಿವೆ.

ಚಂಡೀಗಢದ ನೂತನ ಪಿಸಿಎ ಸ್ಟೇಡಿಯಮ್ ನಲ್ಲಿ ಮೇ 29, ಗುರುವಾರ ಒಂದನೇ ಕ್ವಾಲಿಫೈಯರ್ ಪಂದ್ಯ ಹಣ ಮತ್ತು ಮೇ 30 ಶುಕ್ರವಾರ ಎಲಿಮಿನೇಟರ್ ಪಂದ್ಯ ನಡೆಯುಲಿದೆ.ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಆಗಿರುವ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.ಎರಡನೇ ಕ್ವಾಲಿಫೈಯರ್ ಪಂದ್ಯವು ಜೂನ್ ಒಂದು ರವಿವಾರ ನಡೆದರೆ, ಅತಿ ನಿರೀಕ್ಷಿತ ಫೈನಲ್ ಪಂದ್ಯವು ಜೂನ್ 3 ಮಂಗಳವಾರ ನಡೆಯುತ್ತದೆ’ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ಹವಾಮಾನ ಬದಲಾವಣೆ ನೋಡಿ ಐಪಿಎಲ್ ಪಂದ್ಯಗಳ ಸ್ಥಳವನ್ನು ಬದಲಾಯಿಸಲಾಗಿದೆ.