IPL 2025: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್.ಸಿ.ಬಿ ಗೆ ಭರ್ಜರಿ ಗೆಲುವು :ಫೈನಲ್ ಟಿಕೆಟ್ ಪಡೆದುಕೊಂಡ ಬೆಂಗಳೂರು

IPL 2025: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್.ಸಿ.ಬಿ ಗೆ ಭರ್ಜರಿ ಗೆಲುವು :ಫೈನಲ್ ಟಿಕೆಟ್ ಪಡೆದುಕೊಂಡ ಬೆಂಗಳೂರು

ಚಂಡೀಗಡ: ಪಂಜಾಬ್ ನ ಮುಲ್ಲನ್ ಪುರದ ಮಹರಾಜ ಯದುವೀರ್ ಸಿಂಗ್ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು,ಪಂಜಾಬ್ ತಂಡವನ್ನು ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.ಟಾಸ್ ಗೆದ್ದು ಮೊದಲು ಬೌಲ್ ಮಾಡಿದ ಆರ್.ಸಿ ತಂಡವು ಮಾರಕ ಬೌಲಿಂಗ್ ದಾಳಿಯಿಂದ ಬಲಿಷ್ಠ ಪಂಜಾಬ್ ತಂಡವನ್ನು 101 ರನ್ ಗಳಿಗೆ ಆಲ್ ಔಟ್ ಮಾಡಿದ್ದರು.102 ರನ್ ಗಳ ಗುರಿಯನ್ನು ಬೆನ್ನಟ್ಟಿದ ಆರ್.ಸಿ.ಬಿ ತಂಡವು 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ‌.ಹತ್ತು ಓವರ್ ಬಾಕಿ ಇರುವಂತೆ ಗೆಲುವಿನ ದಡ ಸೇರಿದೆ. ಬೆಂಗಳೂರೂ ತಂಡವು ಈ ಬಾರಿಯ ಐಪಿಎಲ್ ನಲ್ಲಿ ಫೈನಲ್ ಗೆ ಮೊದಲ ಟಿಕೆಟ್ ಪಡೆದುಕೊಂಡಿದೆ.