ನಾಪೋಕ್ಲು ಪೊಲೀಸರಿಂದ ಬಲಮುರಿ, ಕೂಡುಪರಂಬು ಕಾಲೋನಿ ನಿವಾಸಿಗಳಿಗೆ ಕಾನೂನು ಜಾಗೃತಿ ಸಭೆ

ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲಮುರಿ ಗ್ರಾಮದ ಕೂಡುಪರಂಬು ಕಾಲೋನಿಯಲ್ಲಿ ನಾಪೋಕ್ಲು ಪೊಲೀಸರಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಕಾನೂನು ಜಾಗೃತಿ ಸಭೆ ನಡೆಸಲಾಯಿತು.
ಸಭೆಯ ನೇತೃತ್ವ ವಹಿಸಿದ ನಾಪೋಕ್ಲು ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ರಾಘವೇಂದ್ರ ಅವರು ಸಭೆಯಲ್ಲಿ ಪೊಕ್ಸೊ ಕಾಯ್ದೆ, ಜಾತಿ ನಿಂದನೆ ಕಾಯ್ದೆ, ಅಪ್ರಾಪ್ತರ ವಾಹನ ಚಾಲನೆ,ಮಾದಕವಸ್ತುಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಕಾಲೋನಿ ನಿವಾಸಿಗಳಿಗೆ ಜಾಗೃತಿ ಮೂಡಿಸಿದರು.ಬಳಿಕ ಅವರ ಕುಂದು ಕೊರತೆಗಳನ್ನು ಆಲಿಸಿ ಗ್ರಾಮದಲ್ಲಿ ಯಾವುದೇ ಅಹಿತಕರಘಟನೆಗಳು ಹಾಗೂ ಸಮಸ್ಯೆಗಳಾದಲ್ಲಿ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದರು.ಈ ಸಂದರ್ಭ ಕಾಲೋನಿಯ ಪ್ರಮುಖರು,ನಾಪೋಕ್ಲು ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.