ರೋಟರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರಾಗಿ ರತ್ನಾಕರ್ ರೈ, ಕಾಯ೯ದಶಿ೯ಯಾಗಿ ಬಿ.ಕೆ.ಕಾಯ೯ಪ್ಪ ಪದಗ್ರಹಣ: ಜನಮಾನಸದಲ್ಲಿ ಸ್ಮರಣೀಯವಾಗುವಂಥ ಯೋಜನೆ ಕಾಯ೯ಗತಗೊಳಿಸಿ: ಹೆಚ್.ಆರ್.ಕೇಶವ್ ಕರೆ

ರೋಟರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರಾಗಿ ರತ್ನಾಕರ್ ರೈ, ಕಾಯ೯ದಶಿ೯ಯಾಗಿ  ಬಿ.ಕೆ.ಕಾಯ೯ಪ್ಪ ಪದಗ್ರಹಣ:   ಜನಮಾನಸದಲ್ಲಿ ಸ್ಮರಣೀಯವಾಗುವಂಥ ಯೋಜನೆ ಕಾಯ೯ಗತಗೊಳಿಸಿ: ಹೆಚ್.ಆರ್.ಕೇಶವ್ ಕರೆ

ಮಡಿಕೇರಿ:ಸಾಮಾಜಿಕ ಸೇವಾ ಸಂಸ್ಥೆಯಾಗಿ ವಿಶ್ವದಲ್ಲಿ ಪ್ರಮುಖ ಸ್ಥಾನ ಪಡೆದಿರುವ ರೋಟರಿ ಸಂಸ್ಥೆಯು ವಿನೂತನ ಸೇವಾ ಕಾಯ೯ಯೋಜನೆಗಳೊಂದಿಗೆ ಜನಮಾನಸದಲ್ಲಿ ಸದಾ ಸ್ಮರಣೀಯವಾಗಿರಬೇಕೆಂದು ರೋಟರಿ ಜಿಲ್ಲೆ 3181 ನ ಮಾಜಿ ಗವನ೯ರ್ ಹೆಚ್.ಆರ್.ಕೇಶವ್ ಕರೆ ನೀಡಿದ್ದಾರೆ.

ನಗರದ ಕೊಡವ ಸಮಾಜ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನ 2025-26 ನೇ ಸಾಲಿನ ಅಧ್ಯಕ್ಷರಾಗಿ ರತ್ನಾಕರ್ ರೈ ಮತ್ತು ಕಾಯ೯ದಶಿ೯ಯಾಗಿ ಕ್ಯಾರಿ ಕಾಯ೯ಪ್ಪ ಅವರಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.

ಒಳಿತಿಗಾಗಿ ಒಗ್ಗೂಡು ಎಂಬ ಸಂದೇಶದಡಿಯಲ್ಲಿ ಈ ವಷ೯ ರೋಟರಿ ಸಂಸ್ಥೆಗಳು ಕಾಯ೯ನಿವ೯ಹಿಸಲಿದೆ. ಪ್ರತೀ ರೋಟರಿ ಸಂಸ್ಥೆಯೂ ಹೊಸ ಚಿಂತನೆ ಅಳವಡಿಸಿಕೊಂಡು ಜನರ ಮನಸ್ಸಿನಲ್ಲಿ ಸದಾ ಸ್ಮರಣೀಯವಾಗುವಂಥ ಕಾಯ೯ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಕಾಯ೯ಪ್ರವೖತ್ತವಾಗಬೇಕು. ಎಂದು ಸಲಹೆ ನೀಡಿದ ಕೇಶವ್, ರೋಟರಿ ಸಂಸ್ಥೆಗಳು ನೀಡುವ ನೆರವಿನ ಯೋಜನೆಗಳು ಸತ್ಪಾತ್ರರಿಗೆ ದೊರಕುವಂಥೆ ಗಮನ ಹರಿಸಬೇಕು. ಯಾವುದೇ ಯೋಜನೆ ಅಗತ್ಯವುಳ್ಳವರಿಗೆ ದೊರಕದೆ ವ್ಯಥ೯ವಾಗಬಾರದೆಂದು ನುಡಿದರು.ಮಹಿಳೆಯರ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಗಮನ ನೀಡಬೇಕೆಂದು ಹೆಚ್.ಆರ್. ಕೇಶವ್ ಸೂಚಿಸಿದರು.

ರೋಟರಿ ವಲಯ 6 ರ ಸಹಾಯಕ ಗವ೯ನರ್ ಪಿ.ಎಂ.ಧಿಲನ್ ಚಂಗಪ್ಪ ಅವರು ಪ್ರಮೋದ್ ರೈ ಸಂಪಾದಕತ್ವದಲ್ಲಿ ಪ್ರಕಟಿತ ರೋಟೋ ಮಿಸ್ಟ್ ವಾತಾ೯ ಸಂಚಿಕೆ ಅನಾವರಣಗೊಳಿಸಿ ಮಾತನಾಡಿ, ಮಹಿಳಾ ಸ್ವಾವಲಂಭಿ ಯೋಜನೆ, ಅಂಗನವಾಡಿಗಳಿಗೆ ಕಾಯಕಲ್ಪ ಸೇರಿದಂತೆ ಈ ವಷ೯ದಲ್ಲಿ 11 ಜಿಲ್ಲಾ ಯೋಜನೆಗಳನ್ನು 86 ರೋಟರಿ ಸಂಸ್ಥೆಗಳು ರೋಟರಿ ಜಿಲ್ಲೆಯಾದ್ಯಂತ ಜಾರಿಗೊಳಿಸಲಿವೆ ಎಂದು ಮಾಹಿತಿ ನೀಡಿದರು.

ರೋಟರಿಯ ವಲಯ ಸೇನಾನಿ ಕೆ.ಸಿ. ಕಾಯ೯ಪ್ಪ ಮೇಕೇರಿ ಮತ್ತು ಅಪ್ಪಂಗಳ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಮಡಿಕೇರಿಯ ಉದ್ಯಮಿ ಹರೀಶ್ ಕುಮಾರ್ ಸಹಯೋಗದಲ್ಲಿ ನೀಡಲಾದ ಆಟಿಕೆ, ಹಾಸಿಗೆ, ಕುಚಿ೯, ಕುಕ್ಕರ್, ತಟ್ಟೆಗಳು, ನೀರಿನ ಘಟಕಗಳನ್ನು ವಿತರಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ನ ನೂತನ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, 20 ವಷ೯ಗಳ ಇತಿಹಾಸ ಹೊಂದಿರುವ ಮಿಸ್ಟಿ ಹಿಲ್ಸ್ ನಲ್ಲಿ 65 ಸದಸ್ಯರಿದ್ದು, ಎಲ್ಲರ ಸಹಕಾರದೊಂದಿಗೆ ಅನೇಕ ಸಾಮಾಜಿಕ ಸೇವಾ ಕಾಯ೯ಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದರು.ರೋಟರಿ ನಿಕಟಪೂವ೯ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ನಿಕಟಪೂವ೯ ಕಾಯ೯ದಶಿ೯ ಕಟ್ಟೆಮನೆ ಸೋನಜಿತ್ ಹಾಜರಿದ್ದ ಕಾಯ೯ಕ್ರಮದಲ್ಲಿ ನೂತನ ಕಾಯ೯ದಶಿ೯ ಕ್ಯಾರಿ ಕಾಯ೯ಪ್ಪ ವಂದಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಪ್ರಮುಖರಾದ ಬಿ.ಜಿ. ಅನಂತಶಯನ, ಅನಿಲ್ ಹೆಚ್.ಟಿ. ಎ.ಕೆ. ವಿನೋದ್, ಸತೀಶ್ ಸೋಮಣ್ಣ, ರಶ್ಮಿದೀಪಾ, ಡಾ. ಚೇತನ್, ಗಾನಾ ಪ್ರಶಾಂತ್,, ಕಾಯ೯ಕ್ರಮ ನಿವ೯ಹಿಸಿದರು.

ಸಾಧಕರಿಗೆ ಸನ್ಮಾನದ ಗೌರವ .

ಯೋಗದಲ್ಲಿನ ಡಿಂಬಾಸನ ವನ್ನು 30 ನಿಮಿಷ 5 ಸೆಕೆಂಡ್ ಕಾಲ ಒಂದೇ ಭಂಗಿಯಲ್ಲಿ ನಿಂತು ಗಿನ್ನೀಸ್ ವಿಶ್ವದಾಖಲೆ ಮಾಡಿದ ಮದೆನಾಡಿನ ವಿದ್ಯಾಥಿ೯ನಿ ಸಿಂಚನಾ ಅವರನ್ನು ಹಾಗೂ ರಾಜ್ಯಕ್ಕೇ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ತನ್ಮಯಿ ಎಂ.ಎನ್. ಅವರನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಜಿಲ್ಲಾ ಮಾಜಿ ಗವನ೯ರ್ ಹೆಚ್.ಆರ್.ಕೇಶವ್ ಸನ್ಮಾನಿಸಿ ಗೌರವಿಸಿದರು. ತನ್ಮಯಿ ತಂದೆ ವಕೀಲ ಎಂ.ಎ.ನಿರಂಜನ್, ಸಿಂಚನಾ ಪೋಷಕರಾದ ಕೀತಿ೯ಕುಮಾರ್ ಮತ್ತು ರೇಣುಕಾ ಈ ಸಂದಭ೯ ಹಾಜರಿದ್ದರು.