ಜಿಲ್ಲೆಯ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಯಾವುದೇ ಅನ್ಯಾಯ ಆಗುತ್ತಿಲ್ಲ, ಜಮ್ಮಾ ಸಮಸ್ಯೆ, ಪೌತಿಖಾತೆಯಿಂದ ಸಮಸ್ಯೆ: ಮಾಲ್ದಾರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಂದಾಸುಬ್ಬಯ್ಯ

ಮಡಿಕೇರಿ:ಜಿಲ್ಲೆಯ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಯಾವುದೇ ಅನ್ಯಾಯ ಆಗುತ್ತಿಲ್ಲ, ಜಮ್ಮಾ ಸಮಸ್ಯೆ, ಪೌತಿಖಾತೆಯಿಂದ ಸಮಸ್ಯೆಯಾಗುತ್ತಿದೆ ಇದನ್ನು ಕಂದಾಯ ಇಲಾಖೆ ಸರಿಪಡಿಸಬೇಕುಎಂದು ಮಾಲ್ದಾರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಂದಾಸುಬ್ಬಯ್ಯ ಹೇಳಿದ್ದಾರೆ.ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಂದಾಯ ಇಲಾಖೆಗಳ ವೈಫಲ್ಯದಿಂದ ರೈತರು ಶೂನ್ಯಬಡ್ಡಿ ದರದಲ್ಲಿ ಸಾಲ ಪಡೆಯಲು ವಂಚಿತರಾಗಿದ್ದಾರೆ ಹೊರತು ಸಹಕಾರದ ನಿಯಮದಿಂದಲ್ಲ.
ಜವಾಬ್ದಾರಿಯುತ ಸಂಘಟನೆಗಳು ಸಂಪೂರ್ಣ ಮಾಹಿತಿ ತಿಳಿದುಕೊಳ್ಳದೇ ಆರೋಪ ಮಾಡಬಾರದೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ಸಹಕಾರ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಬಗ್ಗೆ ಸಂಘಟನೆಗಳು ಅನಾವಶ್ಯಕವಾಗಿ ಸಾರ್ವಜನಿಕ ವಲಯದಲ್ಲಿ ತಪ್ಪು ಅಭಿಪ್ರಾಯ ಬಿಂಬಿಸುತ್ತಿದೆ. ಇಂತಹ ಅಪವಾದ ಮಾಡುವುದನ್ನು ಕೈಬಿಡುವಂತಾಗಬೇಕು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಅಮ್ಮತ್ತಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಐನಂಡ ಲಾಲಾ ಅಯ್ಯಣ್ಣ ಉಪಸ್ಥಿತರಿದ್ದರು.