ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಮುಂಬೈ ಕೂಲ್ ಕೂಲ್ ಆಟ ಪ್ರೇಕ್ಷಕರು ಫಿದಾ!
ಮುಂಬೈ ತಂಡವು ತನ್ನ ಮೊದಲ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಎರಡು ಗೋಲುಗಳಿಂದ ಸ್ಟಾರ್ಮ್ ಹಾತೂರು ತಂಡದ ವಿರುದ್ಧ ಹಿನ್ನಡೆ ಸಾಧಿಸಿತ್ತು. ಮುಂಬೈ ಮೂಲದ ತಂಡವಾಗಿರುವುದರಿಂದ ಬಹುತೇಕ ಪ್ರೇಕ್ಷಕರಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇತ್ತು.ಆದರೆ ಮೊದಲ ಪಂದ್ಯದಲ್ಲೇ ಕಳಪೆ ಪ್ರದರ್ಶನ ನೀಡಿದ ಮುಂಬೈ, ಮೊದಲ ಪಂದ್ಯ ದ್ವಿತೀಯಾರ್ಧದಲ್ಲಿ 04 ಗೋಲುಗಳನ್ನು ಬಾರಿಸಿ ಗೆಲುವು ನಗೆ ಬೀರಿ ಪ್ರೇಕ್ಷಕರಿಗೆ ರಸದೌತಣ ನೀಡಿತ್ತು. ಆ ನಂತರದ ಎಲ್ಲಾ ಪಂದ್ಯಗಳಲ್ಲಿ ಇಡೀ ಪ್ರೇಕ್ಷಕರ ಮನಗೆದ್ದ ಮುಂಬೈ ತಂಡದ ಆಟಗಾರರು ಯಾವುದೇ ರೀತಿಯ ಒತ್ತಡದ ಆಟಕ್ಕೆ ಮುಂದಾಗದೆ ಶಿಸ್ತಿನ ಆಟದ ಮೂಲಕ ಇಡೀ ಗ್ಯಾಲರಿಯಲ್ಲಿ ನೆರೆದಿದ್ದ ಕ್ರೀಡಾಭಿಮಾನಿಗಳ ಮನೆಗೆಲ್ಲುವುದರೊಂದಿಗೆ ಕೊಡಗು ವರ್ಲ್ಡ್ ಕಪ್ ಕೂಡ ತನ್ನದಾಗಿಸಿಕೊಂಡಿದೆ.
