ಮಳೆಯ ಆರ್ಭಟ: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮರ ಬಿದ್ದು ಮನೆಗಳಿಗೆ ಹಾನಿ

ಸಿದ್ದಾಪುರ: ಸಮೀಪದ ಮಾಲ್ದಾರೆ ಗ್ರಾಮ ಪಂ.ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದ ಜನತಾ ಕಾಲೋನಿ ನಿವಾಸಿ ಸೀನಪ್ಪ, ರವರ ಮನೆ ಮೇಲೆ ಸೋಮವಾರ ಬೆಳಿಗ್ಗೆ ಭಾರಿ ಗಾಳಿಯಿಂದ ಮರ ಬಿದ್ದು ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಬಾಡಗ ಬಾಣಂಗಾಲ ಗ್ರಾಮದ ಗಿರಿಜನ ಕಾಲೋನಿ ವಿಶೇಷ ಚೇತನ ಅನಿಲ್ ರವರ ಮನೆ ಅರ್ಧ ಭಾಗ ಕುಸಿದು ಬಿದಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.