ಸುಂಟ್ಟಿಕೊಪ್ಪ: ವಿದ್ಯುತ್ ಕಂಬ ಹೂಳುವ ಸಂದರ್ಭ ಉರುಳಿಬಿದ್ದ ಕಂಬ:ಗಂಭೀರ ಗಾಯಗೊಂಡ ಯುವಕ
ಸುಂಟ್ಟಿಕೊಪ್ಪ:ವಿದ್ಯುತ್ ಕಂಬ ಬಿದ್ದು ಯುವಕ ಗಂಭೀರ ಗಾಯಗೊಂಡ ಘಟನೆ,ಸುಂಟಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ನಡೆದಿದೆ.ನಂದೀಶ(32) ಗಾಯಗೊಂಡ ಯುವಕ.ಮೂಲತ ಹುಣಸೂರು ತಾಲೂಕಿನ ಐತನಳ್ಳಿ ಗ್ರಾಮದ ಯುವಕ,ವಿದ್ಯುತ್ ಕಂಬ ಹೂಳುವ ಸಂದರ್ಭ ಉರುಳಿಬಿದ್ದು,ಗಾಯಗೊಂಡಿದ್ದಾನೆ.ಯುವಕನನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.ಸ್ಥಳಕ್ಕೆ ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನೀಲ್, ಸದಸ್ಯ ರಫೀಕ್ ಖಾನ್, ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್ ಭೇಟಿ ಪರಿಶೀಲನೆ ನಡೆಸಿದ್ದಾರೆ.ಕಾಮಗಾರಿಯ ಗುತ್ತಿಗೆದಾರ ಹಾಗೂ ಚೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ದಿಂದ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.