ಅಮತ್ತಿ: ಕಾರು ಮತ್ತು ಬೈಕ್ ಅಪಘಾತ ಸಂಭವಿಸಿದ ಘಟನೆ: ಕಾರು ಚಾಲಕ ಬಂಧನ: ಮದ್ಯಪಾನ ಮಾಡಿ ಕಾರು ಚಲಾಯಿಸಿ ಅಮಾಯಕನ ಜೀವ ಬಲಿ ಪಡೆದ!
ವಿರಾಜಪೇಟೆ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿ ವ್ಯಕ್ತಿಗೆ, ಅಪಘಾತ ಪಡಿಸಿ, ಮೃತಹೊಂದಿದ ಘಟನೆ ವಿರಾಜಪೇಟೆ ಅಮ್ಮತ್ತಿಯಲ್ಲಿ ಎರಡು ದಿನಗಳ ಹಿಂದೆ ನಡೆದಿತ್ತು.ವಿರಾಜಪೇಟೆ ತಾಲೂಕು ಅಮ್ಮತ್ತಿ ಆನಂದಪುರ ನಿವಾಸಿ ಡಾಲ್ಟನ್ ಪ್ರಾಯ (51 ವರ್ಷ) ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಮೇಲ್ವಿನ್ (41 ವರ್ಷ) ಗಂಭೀರವಾಗಿ ಗಾಯಗೊಂಡರು ಚಿಕಿತ್ಸೆ ಪಡೆಯತ್ತಿದ್ದಾನೆ.ಕಾರು ಚಲಾಯಿಸಿ, ಅಪಘಾತ ಪಡಿಸಿದ ಗುಡ್ಡೆಹೊಸೂರು ನಿವಾಸಿ ಕಾರು ಮೆಕಾನಿಕ್ ಜಬೀರ್ (34) ಪೊಲೀಸರ ಅತಿಥಿಯಾಗಿದ್ದಾನೆ.
ಘಟನೆಯ ವಿವರ:
ಕುಶಾಲನಗರ ತಾಲೂಕು ಗುಡ್ಡೆಹೊಸೂರು ನಿವಾಸಿ ಕಾರು ಮೆಕಾನಿಕ್ ಜಬೀರ್ ತನ್ನ ಬಿಳಿ ಬಣ್ಣದ ಕಾರು ಮಾರುತಿ ಆಲ್ಟೋ ಕಾರು ಸಂಖ್ಯೆ ಕೆಎ 53ಎಂವಿ-7192 ಕಾರಿನಲ್ಲಿ ತನ್ನ ಸ್ನೇಹಿತರಾದ ಗೌತಮ್, ಪೃಥ್ವಿ, ಮತ್ತು ಸಂತೋಷ್ ರೊಂದಿಗೆ ಗುಡ್ಡೆಹೊಸೂರಿನಿಂದ ವಿರಾಜಪೇಟೆ ನಗರದ ಆಗಮಿಸಿದ್ದರು ಎನ್ನಾಲಾಗಿದೆ. ಮೃತ ಹೊಂದಿರುವ ಡಾಲ್ಫನ್ ಮತ್ತು ಗಾಯಳು ಹಿಂಬದಿ ಸವಾರ ಮೆಲ್ವೀನ್ ತಮ್ಮ ದ್ವಿಚಕ್ರ ವಾಹನ ಡಿಸ್ಕವರ್ ಬೈಕ್ ಸಂಖ್ಯೆ ಕೆಎ-09ಇಎಕ್ಸ್ 0709 ರಲ್ಲಿ ಆನಂಪುರದಿಂದ ಅಮ್ಮತ್ತಿ ಪಟ್ಟಣಕ್ಕೆ ಆಗಮಿಸಿ ತೋಟದಲ್ಲಿ ಕೆಲಸ ನಿರ್ವಹಿಸಿದ್ದ ಕಾರ್ಮಿಕರಿಗೆ ಹಣ ನೀಡಿ ಮನೆಗೆ ಹಿಂದಿರುಗುತಿದ್ದರು. ಸಮಯ ರಾತ್ರಿ ಸುಮಾರು 8 ರ ವೇಳೆಗೆ ಅಮ್ಮತ್ತಿ ಸಿದ್ದಾಪುರ ರಸ್ತೆಯ ಭದ್ರಕಾಳಿ ದೇಗುಲದ ಮುಂಭಾಗ ಹೋಟೆಲ್ ಬಿರಿಯನಿ ಸೆಂಟರ್ ಸನಿಹ ತಿರುವಿನ ಎದುರಿನಿಂದ ವೇಗವಾಗಿ ಬಂದ ಕಾರು ಬೈಕ್ ಗೆ ಮುಖಾಮುಖಿಯಾಗಿ ಡಿಕ್ಕಿಹೊಡಿದಿದೆ. ಪರಿಣಾಮ ಬೈಕ್ ಚಾಲಕ ಮತ್ತು ಹಿಂಬದಿ ಸವಾರ ಅಪಘಾತದ ರಭಸಕ್ಕೆ ಸನಿಹದ ಗುಂಡಿಗೆ ಬಿದ್ದಿದ್ದಾರೆ. ತಲೆಭಾಗ ಮತ್ತು ಮಾರ್ಮಂಗಕ್ಕೆ ಬಲವಾಗಿ ಪೆಟ್ಟುಬಿದ್ದಿದೆ. ಅಪಘಾತವಾದ ಸ್ಥಳದ ಸನಿಹದಲ್ಲೆ ಇದ್ದ ಸಾರ್ವಜನಿಕರು ಗಾಯಳುಗಳನ್ನು ಆರ್.ಐ.ಹೆಚ್.ಪಿ ಆಸ್ಪತ್ರಗೆ ದಾಖಲಿಸಿದ್ದಾರೆ. ಬೈಕ್ ಚಾಲಕ ಸ್ಥಳದಲ್ಲೆ ಮೃತ ಹೊಂದಿದ್ದಾರೆ,ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವಿರಾಜಪೇಟೆ -ಮಡಿಕೇರಿ ಯಿಂದ ಮಂಗಳೂರುವಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಮತ್ತು ವಿರಾಜಪೇಟೆ ವೃತ್ತ ನೀರಿಕ್ಷರು ಹಾಗೂ ಸಿಬ್ಬಂದಿಗಳು ದಾವಿಸಿದ್ದರು. ಅಪಘಾತ ಪಡಿಸಿದ ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯ ವೇಳೆಯಲ್ಲಿ ಕಾರು ಚಾಲಕ ಮದ್ಯಪಾನ ಮಾಡಿರುವುದು ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯ ಮಗ ಡೇರಿಕ್ ವಿವಿನ್ ಅವರು ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕಾರು ಚಾಲಕ ಜಬೀರ್ ನ ಮೇಲೆ ಮದಪಾನದಿಂದ ವಾಹನ ಚಾಲನೆ, ಅಜಾಗರೂಕತೆಯಿಂದ ವಾಹನ ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣವಾಗಿರುವುದು ಬಿ.ಎನ್.ಎಸ್ ಕಾಯ್ದೆ 105 ಮತ್ತು 285 ಅನ್ವಯ ಪ್ರಕರಣ ದಾಖಲಾಗಿದೆ. ಅಪಘಾತಕ್ಕೀಡಾದ ವಾಹನಗಳನ್ನು ವಶಕ್ಕೆ ಪಡೆದಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ:ಕಿಶೋರ್ ಕುಮಾರ್ ಶೆಟ್ಟಿ