ಅಲ್ ಅನ್ಸಾರ್ ಆಸ್ಪತ್ರೆಗೆ ಹತ್ತನೇ ವಾರ್ಷಿಕೋತ್ಸವದ ಸಂಭ್ರಮ: ವಿರಾಜಪೇಟೆಯಲ್ಲಿ ಸಮಾಲೋಚನಾ ಸಭೆ

ಅಲ್ ಅನ್ಸಾರ್ ಆಸ್ಪತ್ರೆಗೆ ಹತ್ತನೇ ವಾರ್ಷಿಕೋತ್ಸವದ ಸಂಭ್ರಮ: ವಿರಾಜಪೇಟೆಯಲ್ಲಿ ಸಮಾಲೋಚನಾ ಸಭೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಅಲ್-ಆನ್ಸಾರ್ ಆಸ್ಪತ್ರೆ ಮೈಸೂರು ಇದರ ಹತ್ತನೇ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ಸಮಾಲೋಚನಾ ಸಭೆ ವಿರಾಜಪೇಟೆಯಲ್ಲಿ ಯಶಸ್ವಿಯಾಗಿ ನಡೆಯಿತು.ವಿರಾಜಪೇಟೆಯ ನಸ್ರತುಲ್ ಮದರಸ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ವಿರಾಜಪೇಟೆ ಅಜಾಮ್ ಮಸೀದಿಯ ಖತೀಬರಾದ ಮೌಲನಾ ಆಸೀಬ್ ರವರು ಖುರಾನ್ ಕಿರಾಅತ್ ಪಠಿಸುವ ಮೂಲಕ ಉದ್ಘಾಟಿಸಿದರು.ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಇಪ್ತಿಖಾರ್ ಅಹಮದ್ ಆಸ್ಪತ್ರೆಯಿಂದ ನೀಡುವ ಸೌಲಭ್ಯ ಮತ್ತು ಸೇವೆಗಳ ಬಗ್ಗೆ ಹಾಗೂ ಸಮುದಾಯದ ಅರೋಗ್ಯ ರಕ್ಷಣೆಯಲ್ಲಿ ಅಲ್ ಅನ್ಸಾರ್ ಆಸ್ಪತ್ರೆ ಒದಗಿಸುತ್ತಿರುವ ಎಲ್ಲಾ ಮಾಹಿತಿಗಳನ್ನು ಸವಿಸ್ತಾರವಾಗಿ ವಿವರಿಸಿದರು.

ಅಲ್ ಅನ್ಸಾರ್ ಆಸ್ಪತ್ರೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಪುಜೈಲ್ ಇಯಾಜ್ ಮಾತನಾಡಿ ಅಲ್ ಅನ್ಸಾರ್ ಆಸ್ಪತ್ರೆಯ ಸೇವಾ ಉಪಕ್ರಮಗಳು ಹಾಗೂ 10 ವರ್ಷಗಳಲ್ಲಿ ಆಸ್ಪತ್ರೆ ನೀಡಿದ ಕೊಡುಗೆಗಳು ಹಾಗೂ ಹತ್ತನೇ ವಾರ್ಷಕ ಸಂಭ್ರಮದಲ್ಲಿ ನೀಡುತ್ತಿರುವ ಸೇವೆಗಳ ಬಗ್ಗೆ ಮಾತನಾಡಿ,ನಮ್ಮ ಆಸ್ಪತ್ರೆಯಲ್ಲಿ ಹಲವಾರು ರೋಗಿಗಳು ವೈದ್ಯಕೀಯ ಸೇವೆಯನ್ನು ಪಡೆದು ಯಶಸ್ವಿಯನ್ನು ಕಂಡಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಆಸ್ಪತ್ರೆ ನಡೆದು ಬಂದ ಹಾದಿ ಹಾಗೂ ಕೊರೋನಾ ಸಂದರ್ಭದ ತುರ್ತು ಸೇವೆ,ವೈದ್ಯಕೀಯ ಸೇವೆ,ಸಮಾಜ ಸೇವೆ,ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡುತ್ತಿರುವುದಾಗಿ ತಿಳಿಸಿದ ಅವರು ವೈದ್ಯಕೀಯ ಹಾರೈಕೆಯನ್ನು ಮುಂದಿನ ಹಂತಕ್ಕೆ ಕೊಡೊಯ್ಯುವ ನಿಟ್ಟಿನಲ್ಲಿ ದಂತ ಚಿಕಿತ್ಸೆ,ತುರ್ತು ಅಪಘಾತ ಸೇವೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿರಾಜಪೇಟೆ ಸ್ನೇಹಿತರ ಒಕ್ಕೂಟದ ಡಿ.ಎ.ಎಜಾಝ್ ಆಹ್ಮದ್‌, ಅನುಗ್ರಹ ಜನಸೇವಾ ಚಾರಿಟೇಬಲ್ ಟ್ರಸ್ಟ್ ಕೊಡಗು ಇದರ ಸೈಫುದ್ದಿನ್ ಚಾಮಿಯಾಲ,ಅಬ್ದುಲ್ ರಝಾಕ್ ವಿರಾಜಪೇಟೆ, ಕಾಂಗ್ರೆಸ್ ಗ್ಯಾರಂಟಿ ಅನುಷ್ಠಾನ ಸಮಿತಿಯ ನಾಸರ್ ಸಿ.ಎ.,ಅಸ್ಕರ್ ಸಿದ್ದಾಪುರ, ವಿರಾಜಪೇಟೆ ಮಸೀದಿಯ ಅಧ್ಯಕ್ಷ ಮಸೂದ್,ಹಬೀಬ್ ವಿರಾಜಪೇಟೆ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಅಬ್ದುಲ್ ಜಲೀಲ್,ಸದಸ್ಯ ಮತೀನ್,ಆಸ್ಪತ್ರೆಯ ವ್ಯವಸ್ಥಾಪಕರಾದ ಡಾ.ಅಬ್ದುಲ್ ಕಲ್ಲಕ್, ಮಾರ್ಕೆಟಿಂಗ್ ವ್ಯವಸ್ಥಾಪಕರಾದ ಸುಹೈಲ್ ಮುಕ್ರಮ್,ಶಾಫಿ ಜುಮ್ಮ ಮಸೀದಿಯ ಅಧ್ಯಕ್ಷ ರಶೀದ್‌,ಮಸೀದಿ ಆಜಮ್ ನಿಸ‌ರ್ ಆಹಮದ್,ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮುನವ್ವರ್, ಆಸ್ಪತ್ರೆಯ ಡಾ.ಅನೀಸ್,ರಿಯಾಜುದ್ದೀನ್ ಮತ್ತಿತರರು ಹಾಜರಿದ್ದರು.